ಬೆಂಗಳೂರು[ಏ.21]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಚೆನ್ನೈ ಸೂಪರ್’ಕಿಂಗ್ಸ್ ವಿರುದ್ಧ ಕಣಕ್ಕಿಳಿದರೆ ಅಪರೂಪದ ದಾಖಲೆ ಬರೆಯಲಿದ್ದಾರೆ.

ಹೌದು, ಎಬಿಡಿ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಚೆನ್ನೈ ಸೂಪರ್’ಕಿಂಗ್ಸ್ ತಂಡದ ವಿರುದ್ಧ ಕಣಕ್ಕಿಳಿದರೆ 150 ಐಪಿಎಲ್ ಪಂದ್ಯಗಳನ್ನಾಡಿದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಐಪಿಎಲ್’ನಲ್ಲಿ 150 ಪಂದ್ಯಗಳನ್ನಾಡಿದ ಮೊದಲ ವಿದೇಶಿ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಗೆ ಮಿ.360 ಪಾತ್ರರಾಗಲಿದ್ದಾರೆ. ಇದುವರೆಗೆ ಭಾರತದ 12 ಕ್ರಿಕೆಟಿಗರು 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ.

ಐಪಿಎಲ್ ಬ್ರೇಕ್ ಬಗ್ಗೆ ತುಟಿಬಿಚ್ಚಿದ ಎಬಿಡಿ..

2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದ ಎಬಿಡಿ, 28 ಪಂದ್ಯಗಳನ್ನಾಡಿದ್ದರು. 28 ಪಂದ್ಯಗಳಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 671 ರನ್ ಬಾರಿಸಿದ್ದರು. ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಎಬಿಡಿ ತಂಡದ ಸ್ಟಾರ್ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಆರ್’ಸಿಬಿ ಪರ ಎಬಿಡಿ ಒಟ್ಟು 121 ಪಂದ್ಯಗಳನ್ನಾಡಿ 2 ಶತಕ ಹಾಗೂ 29 ಅರ್ಧಶತಕ ಸಹಿತ 3589 ರನ್ ಸಿಡಿಸಿದ್ದಾರೆ.   

ಬೆಂಗಳೂರಲ್ಲಿಂದು ಕೊಹ್ಲಿ vs ಧೋನಿ ಫೈಟ್

ಇತ್ತೀಚೆಗಷ್ಟೇ ಐಪಿಎಲ್’ನಲ್ಲಿ 200 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದ ಎಬಿಡಿ, ಚೆನ್ನೈ ವಿರುದ್ಧ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.