ಅಥೆನ್ಸ್[ಜು.21]: ನಾವೆಲ್ಲ ಹೆಚ್ಚೆಂದರೆ ಹೋಟೆಲ್, ರೆಸ್ಟೋರೆಂಟ್’ಗಳಲ್ಲಿ ಹೆಚ್ಚೆಂದರೆ ಸಾವಿರ ಇಲ್ಲವೇ ಎರಡು ಸಾವಿರ ಟಿಪ್ಸ್ ಕೊಡೋದನ್ನು ನೋಡಿದರೇ ಹುಬ್ಬೇರಿಸುತ್ತೇವೆ. ಆದರೆ ಪೋರ್ಚುಗಲ್’ನ ಕ್ರಿಸ್ಟಿಯಾನೋ ರೊನಾಲ್ಡೊ ಬರೋಬ್ಬರಿ 16 ಲಕ್ಷ ರುಪಾಯಿ ಟಿಪ್ಸ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.  

ಇದನ್ನು ಓದಿ: ಫಿಫಾ ವಿಶ್ವಕಪ್ ಸೋಲಿನ ಬಳಿಕ ಮ್ಯಾಡ್ರಿಡ್ ತಂಡ ತೊರೆದ ರೋನಾಲ್ಡೋ

ಹೌದು, ಕ್ರಿಸ್ಟಿಯಾನೋ ರೋನಾಲ್ಡೋ ವಿಶ್ವಕಪ್ ಮುಗಿಸಿ, ಇಟಲಿಯ ಜುವೆಂಟಸ್ ಕ್ಲಬ್‌ಗೆ ಸೇರುವ ಮುನ್ನ ಕುಟುಂಬದೊಂದಿಗೆ ಗ್ರೀಸ್‌ಗೆ ಪ್ರವಾಸಕ್ಕಾಗಿ ತೆರಳಿದ್ದರು. ಈ ವೇಳೆ ಅವರು ತಂಗಿದ್ದ ರೆಸಾರ್ಟ್‌ನಲ್ಲಿ ಸಿಕ್ಕ ಸೇವೆ ಅತ್ಯುತ್ತಮವಾಗಿದ್ದ ಕಾರಣ, ಸಿಬ್ಬಂದಿಗೆ ಬರೋಬ್ಬರಿ ₹16 ಲಕ್ಷ ಟಿಪ್ಸ್ ನೀಡಿ ಗಮನ ಸೆಳೆದಿದ್ದಾರೆ.

ಇದನ್ನು ಓದಿ: ಇಟಲಿಯಲ್ಲೀಗ ಕ್ರಿಸ್ಟಿಯಾನೋ ರೊನಾಲ್ಡೋ ಮೇನಿಯಾ!

ರೊನಾಲ್ಡೋ ಇಷ್ಟೊಂದು ಮೊತ್ತದ ಟಿಪ್ಸ್ ನೀಡಿರುವುದು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೋರ್ಚುಗಲ್ ಆಟಗಾರನ ಔದಾರ್ಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.