ಫಿಫಾ ವಿಶ್ವಕಪ್ ಸೋಲಿನ ಬಳಿಕ ಮ್ಯಾಡ್ರಿಡ್ ತಂಡ ತೊರೆದ ರೋನಾಲ್ಡೋ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ನಿರ್ಗಮನದಿಂದ ಅಭಿಮಾನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಸ್ಪಾನೀಶ್ ಲೀಗ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಅಷ್ಟಕ್ಕೂ ರೋನಾಲ್ಡೋ ನೀಡಿದ ಶಾಕ್ ಏನು? ಇಲ್ಲಿದೆ ವಿವರ
ಮ್ಯಾಡ್ರಿಡ್(ಜು.06): ಫಿಪಾ ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಪಂದ್ಯದಲ್ಲಿ ಸೋತು ನಿರ್ಗಮಿಸಿದ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೋನಾಲ್ಡೋ ಇದೀಗ ಸ್ಪಾನೀಶ್ ಲೀಗ್ ಅಭಿಮಾನಿಗಳಿಗೂ ಶಾಖ್ ನೀಡಿದ್ದಾರೆ.
ವಿಶ್ವ ಶ್ರೇಷ್ಠ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಸ್ಪಾನಿಶ್ ಲೀಗ್ ತೊರೆದು ಇಟಲಿಯನ್ ಲೀಗ್‌ನತ್ತ ಮುಖ ಮಾಡಿದ್ದಾರೆ. ಯುರೋಪ್‌ನ ಪ್ರತಿಷ್ಠಿತ ಕ್ಲಬ್ ರಿಯಲ್ ಮ್ಯಾಡ್ರಿಡ್ ಪರ ಹಲವು ವರ್ಷಗಳಿಂದ ಆಡುತ್ತಿದ್ದ ರೊನಾಲ್ಡೋ, ಇದೀಗ ಇಟಲಿಯ ಚಾಂಪಿಯನ್ ತಂಡ ಜುವೆಂಟಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಪ್ರಕಟಿಸಿವೆ.
ತಂಡದೊಂದಿಗೆ 4 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ಆವೃತ್ತಿಗೆ 30 ಮಿಲಿಯನ್ ಯುರೋ (ಅಂದಾಜು .241 ಕೋಟಿ) ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ರಿಯಲ್ ಮ್ಯಾಡ್ರಿಡ್‌ಗೂ ಮುನ್ನ ರೊನಾಲ್ಡೋ, ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದರು.