ಇಲ್ಲಿ ರೊನಾಲ್ಡೋ ಹೆಸರಿನಲ್ಲಿ ಐಸ್‌ಕ್ರೀಂ, ಪಿಜ್ಜಾಗೆ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ರೊನಾಲ್ಡೋ ಹೆಸರುಳ್ಳ ಜೆರ್ಸಿಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಸಾಲು ಸಾಲು ಅಭಿಮಾನಿಗಳು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ. 

ಟುರಿನ್‌ (ಇಟಲಿ): ಸ್ಪ್ಯಾನಿಶ್ ಲೀಗ್‌ನ ರಿಯಲ್‌ ಮ್ಯಾಡ್ರಿಡ್‌ ತೊರೆದು ಬರೋಬ್ಬರಿ 891 ಕೋಟಿ ರುಪಾಯಿಗೆ ಇಟಲಿಯ ಜುವೆಂಟೆಸ್‌ಗೆ ಕ್ರಿಸ್ಟಿಯಾನೋ ರೊನಾಲ್ಡೋ ಸೇರ್ಪಡೆಗೊಳ್ಳುತ್ತಿದ್ದಂತೆ, ಇಟಲಿಯ ಫುಟ್ಬಾಲ್‌ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

ಇಲ್ಲಿ ರೊನಾಲ್ಡೋ ಹೆಸರಿನಲ್ಲಿ ಐಸ್‌ಕ್ರೀಂ, ಪಿಜ್ಜಾಗೆ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ರೊನಾಲ್ಡೋ ಹೆಸರುಳ್ಳ ಜೆರ್ಸಿಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಸಾಲು ಸಾಲು ಅಭಿಮಾನಿಗಳು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ. 

ಕ್ರಿಸ್ಟಿಯಾನೋ ರೊನಾಲ್ಡೋ ‘ಪೋಪ್‌’ ಅಷ್ಟೇ ಮುಖ್ಯ ಎಂದು ಅಭಿಮಾನಿಗಳು ಪೋಸ್ಟರ್‌ಗಳನ್ನು ಹಿಡಿದು ನಿಂತಿರುವ ದೃಶ್ಯಗಳು ಸಹ ಸೆರೆಯಾಗಿವೆ. ರೊನಾಲ್ಡೋ ಆಗಮನಕ್ಕೆ ಇಲ್ಲಿನ ಅಭಿಮಾನಿಗಳು ಕಾದು ಕುಳಿತಿದ್ದಾರೆ.