Asianet Suvarna News Asianet Suvarna News

2009ರ ರೇಪ್ ಕೇಸ್ ಮತ್ತೆ ವಿಚಾರಣೆ-ಸಂಕಷ್ಟದಲ್ಲಿ ರೋನಾಲ್ಡೋ

ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೋನಾಲ್ಡೋ ಮೇಲಿದ್ದ ರೇಪ್ ಕೇಸ್ ಮತ್ತೆ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ? ಮತ್ತೆ ವಿಚಾರಣೆ ಕೈಗೆತ್ತಿಕೊಂಡಿದ್ದೇಕೆ? ಇಲ್ಲಿದೆ.

Cristiano Ronaldo in trouble Las Vegas Police to reopen 2009 prime case
Author
Bengaluru, First Published Oct 3, 2018, 2:56 PM IST
  • Facebook
  • Twitter
  • Whatsapp

ಲಾಸ್ ವೆಗಾಸ್(ಅ.03): ಫುಟ್ಬಾಲ್ ಲೋಕದ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ರಿಸ್ಟಿಯಾನೋ ರೋನಾಲ್ಡೋ ಮೇಲಿದ್ದ 2009ರ ಅತ್ಯಾಚಾರ ಪ್ರಕರಣವನ್ನ ಪೊಲೀಸರು ಮತ್ತೆ ತನಿಖೆಗೆ ಮುಂದಾಗಿದ್ದಾರೆ.

ಯುವೆಂಟಸ್ ತಂಡ ಸೇರಿಕೊಂಡ ಬೆನ್ನಲ್ಲೇ ರೋನಾಲ್ಡೋ ಇದೀಗ ಸಂಕಷ್ಟ ಎದುರಿಸಬೇಕಾಗಿದೆ. ಜೂನ್ 12, 2009ರಲ್ಲಿ ಲಾಸ್  ವೆಗಾಸ್ ನೈಟ್ ಕ್ಲಬ್‌ನಲ್ಲಿ  ಮಹಿಳೆ ಭೇಟಿಯಾದ ರೋನಾಲ್ಡ್ ಆಕೆಯನ್ನ ಪೆಂಟ್‌ಹೌಸ್ ಪಾರ್ಟಿಗೆ ಕರೆದೊಯ್ದು ರೇಪ್ ನಡೆಸಿದ್ದಾರೆ ಎಂದು ಆಕೆ ದೂರು ದಾಖಲಿಸಿದ್ದರು. 

ಪೊಲೀಸ್ ವಿಚಾರಣೆ ವೇಳೆ ಆಕೆಗೆ 2.74 ಕೋಟಿ ರೂಪಾಯಿ ನೀಡಿ ಬಾಯಿ ಮುಚ್ಚಿಸಲಾಗಿತ್ತು ಎಂದು ಮಹಿಳೆ ಇದೀಗ ರೇಪ್ ಪ್ರಕರಣವನ್ನ ಮತ್ತೆ ತನಿಖೆ ನಡೆಸಲು ಪೊಲೀಸರಿಗೆ ಮನವಿ ಮಾಡಿದ್ದಾರೆ.  ರೋನಾಲ್ಡೋ ರೇಪ್ ಪ್ರಕರಣವನ್ನ ಪೊಲೀಸರು ಇದೀಗ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಶೀಘ್ರವೇ ರೋನಾಲ್ಡೋ ಹೇಳಿಕೆ ಪಡೆಯಲು ನಿರ್ಧರಿಸಲಾಗಿದೆ.

2009ರಲ್ಲೇ ಹಲವು ತಿರುವು ಪಡೆದುಕೊಂಡ ರೇಪ್ ಪ್ರಕರಣ ಇದೀಗ ಮತ್ತೆ ಮುಖ್ಯವಾಹಿನಿಗೆ  ಬಂದಿದೆ. ಈ ಬಾರಿ ಈ ಪ್ರಕರಣ ಇನ್ನೆಷ್ಟು ತಿರುವು ಪಡೆದುಕೊಳ್ಳಲಿದೆಯೋ ಅನ್ನೋದು ಸದ್ಯಕ್ಕಿರುವ ಕುತೂಹಲ.

Follow Us:
Download App:
  • android
  • ios