ರೊನಾಲ್ಡೊ ಅವರು ಕಾನೂನು ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿವೆ

ಬರ್ಲಿನ್(ಡಿ.03): ಫುಟ್ಬಾಲ್ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ನಂತರ ಮತ್ತೊಬ್ಬ ಜಗದ್ವಿಖ್ಯಾತ ಫುಟ್ಬಾಲಿಗ, ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ ವಿರುದ್ಧವೂ ತೆರಿಗೆ ವಂಚನೆ ಆರೋಪಗಳು ಕೇಳಿಬಂದಿವೆ.

ತಮ್ಮ ಆದಾಯದ ಬಹುಪಾಲು ಅಂಶವನ್ನು ವೆಸ್ಟ್‌ಇಂಡೀಸ್‌ನಲ್ಲಿರುವ ಕಂಪೆನಿಯೊಂದಕ್ಕೆ ವರ್ಗಾಯಿಸಿ ನೈಜ ಆದಾಯವನ್ನು ಮುಚ್ಚಿಡುವ ಮೂಲಕ ತೆರಿಗೆ ವಿಚಾರದಲ್ಲಿ ಪೋರ್ಚುಗಲ್ ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದಾರೆಂದು ಯೂರೋಪ್‌ನ ತನಿಖಾ ಸಂಸ್ಥೆಗಳ ಒಕ್ಕೂಟ (ಇಐಸಿ) ಪತ್ತೆ ಹಚ್ಚಿದೆ.

ಇದರ ಮಾಹಿತಿಯು ಸೋರಿಕೆಯಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆಯೆಂದು ಹೇಳಲಾಗಿದೆ. ಹೀಗಾಗಿ, ರೊನಾಲ್ಡೊ ಅವರು ಕಾನೂನು ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿವೆ ಎನ್ನಲಾಗಿದೆ.