ಕೋಲ್ಕತಾ(ಜ.08): ಟೀಂ ಇಂಡಿಯಾ ಹಿರಿಯ ಆಲ್ರೌಂಡರ್, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ 2019ರ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾ ವಾಪಾಸ್ಸಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಯುವಿ ಕಠಿಣ ಪ್ರಯತ್ನ ಆರಂಭಿಸಿದ್ದಾರೆ.  ಐಪಿಎಲ್ ಮೂಲಕ ಮತ್ತೆ ಟೀಂ ಇಂಡಿಯಾಗೆ ಆಯ್ಕಯಾಗೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಂಡೋ-ಆಸಿಸ್ ಏಕದಿನ: ಜಸ್‌ಪ್ರೀತ್ ಬುಮ್ರಾಗೆ ರೆಸ್ಟ್, ಯುವ ವೇಗಿಗೆ ಸ್ಥಾನ!

ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ ನಾನು ವಿದಾಯ ಹೇಳಿದ ಮೇಲೆ ನೋವು ಕಾಡುತ್ತಿರಬಾರದು. ಇದಕ್ಕಾಗಿ ಶ್ರೇಷ್ಠ ಮಟ್ಟದಲ್ಲೇ ವಿದಾಯ ಹೇಳಲು ಇಚ್ಚಿಸುತ್ತೇನೆ. ಸದ್ಯ ರಣಜಿ ಲೀಗ್ ಪಂದ್ಯದಲ್ಲಿ ಅಂತಿಮ ಪಂದ್ಯ ಆಡಬೇಕಿದೆ. ಮುಂದಿನ ಹಂತಕ್ಕೆ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ಯುವರಾಜ್ ಸಿಂಹ್ ಹೇಳಿದ್ದಾರೆ.

ಇದನ್ನೂ ಓದಿ: 2019ರಲ್ಲಿ ಕೊಹ್ಲಿ ಪುಡಿ ಮಾಡಲಿದ್ದಾರೆ ತೆಂಡುಲ್ಕರ್ 5 ದಾಖಲೆಗಳು!

ರಣಜಿ ಬಳಿಕ ಐಪಿಎಲ್ ಟೂರ್ನಿಯಿದೆ. ಟಿ20 ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ 2019ರ ವಿಶ್ವಕಪ್ ಟೂರ್ನಿಗೆ ಕಮ್‌ಬ್ಯಾಕ್ ಮಾಡೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಭಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ಕೋಟಿ ರೂಪಾಯಿ ನೀಡಿ ಖರೀದಿಸಿದೆ.