ನವದೆಹಲಿ(ಫೆ.15): ಪುಲ್ವಾಮದಲ್ಲಿ CRPF ಯೋಧರ ಮೇಲಿನ ಭಯೋತ್ವಾದಕರ ದಾಳಿಗೆ ದೇಶ-ವಿದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬ ಭಾರತೀಯರು ಪ್ರತೀಕಾರ ತೀರಿಸಲು ಒತ್ತಾಯಿಸಿದ್ದಾರೆ. ಬಾಲಿವುಡ್ ನಟ-ನಟಿಯರು, ಟೀಂ ಇಂಡಿಯಾ ಕ್ರಿಕೆಟಿಗರು ಉಗ್ರರ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೀಕೆಗಳ ಬಳಿಕ ಉಗ್ರರ ಕೃತ್ಯವನ್ನ ಖಂಡಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!

ಫೆ.15 ರಂದು ನಡೆದ ಉಗ್ರರ ದಾಳಿಗೆ ಭಾರತದ 44  CRPF ಯೋಧರು ಹುತಾತ್ಮರಾಗಿದ್ದಾರೆ. ಘಟನೆ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಹಲವು ಕ್ರೀಡಾಪಟುಗಳು ದಾಳಿಯನ್ನ ಖಂಡಿಸಿದ್ದರು. ಆದರೆ ವಿರಾಟ್ ಕೊಹ್ಲಿ ಖಾಸಗಿ ಜಾಹೀರಾತು ಟ್ವೀಟ್ ಮಾಡಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 

ಇದನ್ನೂ ಓದಿ: ಪುಲ್ವಾಮ ದಾಳಿ : ಉಗ್ರರ ಕೃತ್ಯ ಖಂಡಿಸಿದ ಸೆಹ್ವಾಗ್-ಗಂಭೀರ್!

ತಕ್ಷಣವೇ ಎಚ್ಚೆತ್ತ ವಿರಾಟ್ ಕೊಹ್ಲಿ ಟ್ವೀಟ್ ಡೀಲೀಟ್ ಮಾಡಿದ್ದಾರೆ. ಬಳಿಕ ಪುಲ್ವಾಮ ಉಗ್ರರ ದಾಳಿಯಲ್ಲಿ ಮಡಿದ ವೀರ ಯೋಧರನ್ನ ಸ್ಮರಿಸಿದ್ದಾರೆ. ಇಷ್ಟೇ ಅಲ್ಲ ಗಾಯಗೊಂಡಿರುವ ಯೋಧರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.