853 ಪ್ರಯಾಣಿಕರನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ ಅತೀ ದೊಡ್ಡ Airbus A380 ವಿಮಾನವನ್ನ ಆಸ್ಟ್ರೇಲಿಯಾ ಕ್ರಿಕೆಟಿಗ ಮುನ್ನಡೆಸಿದ್ದಾರೆ. ಹೌದು ಪೈಲೆಟ್ ಆಗಿ ಈ ವಿಮಾನವನ್ನ ಹಾರಾಡಿಸದ ಆಸಿಸ್ ಕ್ರಿಕೆಟಿಗನಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಯಾರು ಆ ಕ್ರಿಕೆಟಿಗ? ಇಲ್ಲಿದೆ. 

ಸಿಡ್ನಿ(ಫೆ.20): ಆಸ್ಟ್ರೇಲಿಯಾ ಕ್ರಿಕೆಟಿಗ ಉಸ್ಮಾನ್ ಖವಾಜ ವಿಶ್ವದ ಅಂತ್ಯದ ದೊಡ್ಡ ವಿಮಾನ ಹಾರಾಟ ನಡೆಸಿದ್ದಾರೆ. ಪೈಲೆಟ್ ಆಗಿ ಖುದ್ದು ವಿಮಾನ ಹಾರಿಸಿದ ಉಸ್ಮಾನ್ ಖವಾಜ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಉಸ್ಮಾನ್ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ಏರ್‌ಕ್ರಾಫ್ಟ್ Airbus A380 ವಿಮಾನ ಹಾರಾಟ ನಡೆಸಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯ- ಕೇಂದ್ರ ಸರ್ಕಾರದ ನಿರ್ಧಾರ ಅಂತಿಮ!

ಉಸ್ಮಾನ್ ಖವಾಜ ಆಸ್ಟ್ರೇಲಿಯಾ ತಂಡ ಉದಯೋನ್ಮುಖ ಬ್ಯಾಟ್ಸ್‌ಮನ್. ಇಷ್ಟೇ ಅಲ್ಲ ಈಗಾಗಲೇ ಪೈಲೆಟ್ ಸರ್ಟಿಫಿಕೆಟ್ ಪಡೆದುಕೊಂಡಿದ್ದಾರೆ. UNSW (University of New South Wales - School of Aviation)ಯುವಿವರ್ಸಿಟಿಯಲ್ಲಿ ಪೈಲೆಟ್ ಡಿಗ್ರಿ ಮುಗಿಸಿರುವ ಉಸ್ಮಾನ್ ಖವಾಜ ಅಧಿಕೃತ ಪೈಲೆಟ್ ಲೈಸೆನ್ಸ್ ಹೊಂದಿದ್ದಾರೆ.

Scroll to load tweet…

ಇದನ್ನೂ ಓದಿ: ಭಾರತ-ಆಸೀಸ್‌ ಬೆಂಗಳೂರು ಪಂದ್ಯ: ಟಿಕೆಟ್‌ಗೆ ಮುಗಿಬಿದ್ದ ಜನ

Airbus A380 ವಿಮಾನದಲ್ಲಿ ಬರೋಬ್ಬರಿ 853 ಪ್ರಯಾಣಿಕರನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಈ ವಿಮಾನದ ಗರಿಷ್ಠ ವೇಗ 1,185 km/h. ವಿಶ್ವದಲ್ಲೇ ಹೆಸರುವಾಸಿಯಾಗಿರುವ ಈ ವಿಮಾನದಲ್ಲಿ ಪೈಲೆಟ್ ಆಗಿ ಹಾರಾಡಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.