Asianet Suvarna News Asianet Suvarna News

ಮಯಾಂಕ್‌ಗೆ ‘ಸಿಯಟ್‌’ನಿಂದ ಬ್ಯಾಟ್‌ ಪ್ರಾಯೋಜಕತ್ವ

ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಇದೀಗ ಸಿಯಟ್ ಪ್ರಾಯೋಜಕತ್ವ ಲಭಿಸಿದೆ. ಇನ್ಮುಂದೆ ಮಯಾಂಕ್ ಸಿಯಟ್ ಸ್ಟಿಕ್ಕರ್ ಬ್ಯಾಟ್ ಬಳಸಲಿದ್ದಾರೆ. ಮಯಾಂಕ್ ಪ್ರಾಯೋಜಕತ್ವ ಕುರಿತು ವಿವರ ಇಲ್ಲಿದೆ.
 

Cricketer Mayanak Agarwal got CEAT bat sponsorship
Author
Bengaluru, First Published Feb 13, 2019, 9:52 AM IST

ನವದೆಹಲಿ(ಫೆ.13): ಇತ್ತೀಚೆಗಷ್ಟೇ ಭಾರತ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌, ಟೈರ್‌ ತಯಾರಿಯಾ ಸಂಸ್ಥೆ ‘ಸಿಯೆಟ್‌’ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ‘ಸಿಯೆಟ್‌’ ಸಂಸ್ಥೆ ಮಯಾಂಕ್‌ಗೆ ಬ್ಯಾಟ್‌ ಪ್ರಯೋಜಕತ್ವ ನೀಡಲಿದೆ. 

ಇದನ್ನೂ ಓದಿ: ಆಸೀಸ್‌ ವಿರುದ್ಧ ತಮಾಷೆ: ವೀರೂಗೆ ಹೇಡನ್‌ ಎಚ್ಚರಿಕೆ!

ಮಯಾಂಕ್‌ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ‘ಸಿಯೆಟ್‌’ ಸ್ಟಿಕ್ಕರ್‌ ಉಳ್ಳ ಬ್ಯಾಟ್‌ ಬಳಸಲಿದ್ದಾರೆ. ಮಂಗಳವಾರದಿಂದ ಆರಂಭಗೊಂಡ ಇರಾನಿ ಟ್ರೋಫಿ ಪಂದ್ಯದಲ್ಲಿ ರಾಜ್ಯದ ಕ್ರಿಕೆಟಿಗ ಹೊಸ ಬ್ಯಾಟ್‌ ಬಳಸಿದರು. ಸಿಯೆಟ್‌ ಸಂಸ್ಥೆ ಭಾರತೀಯ ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ, ಶುಭ್‌ಮನ್‌ ಗಿಲ್‌, ಹರ್ಮನ್‌ಪ್ರೀತ್‌ ಕೌರ್‌, ಇಶಾನ್‌ ಕಿಶನ್‌ಗೆ ಬ್ಯಾಟ್‌ ಪ್ರಾಯೋಜಕತ್ವ ನೀಡುತ್ತಿದೆ.

 

 

ಇದನ್ನೂ ಓದಿ: 2021ರ ಏಕದಿನ ವಿಶ್ವಕಪ್‌: ಭಾರತಕ್ಕಿಲ್ಲ ನೇರ ಪ್ರವೇಶ?

ವಿದರ್ಭ ವಿರುದ್ಧ ಇರಾನಿ ಟ್ರೋಫಿ ಪಂದ್ಯದಲ್ಲಿ 95 ರನ್ ಸಿಡಿಸಿರುವ ಮಯಾಂಕ್ ಅಗರ್ವಾಲ್ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಆಸರೆಯಾಗಿದ್ದರು. ಇತ್ತೀಚೆಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಮಯಾಂಕ್ 2 ಟೆಸ್ಟ್ ಪಂದ್ಯದಿಂದ 195 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿವೆ.

Follow Us:
Download App:
  • android
  • ios