ಮುಂಬೈ(ಅ.05): ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಗಪು ಚುಪ್ ಆಗಿ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ವರದಿ ಹಲವು ದಿನಗಳಿಂದಲೇ ಇದೆ. ಹಲವು ಬಾರಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಅಥವಾ ಅಥಿಯಾ ಎಲ್ಲೂ ಕೂಡ ತಮ್ಮ ರಿಲೇಶನ್‍‌ಶಿಪ್ ಕುರಿತು ಮೌನ ಮುರಿದಿಲ್ಲ. ಇದೀಗ ರಾಹುಲ್ ಹಾಗೂ ಅಥಿಯಾ ಶೆಟ್ಟಿ ರೆಸ್ಟೋರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಹೊರಬಿದ್ದಿರುವ ರಾಹುಲ್, ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಆಥಿಯಾ ಶೆಟ್ಟಿ ಹಾಗೂ ಇತರ ಗೆಳೆಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಬಾಲಿವುಡ್‌ನ ಸೂರಜ್ ಪಾಂಚೋಲಿ, ಆಕಾಂಕ್ಷ ರಂಜನ್ ಕೂಡ ಕಾಣಿಸಿಕೊಂಡಿದ್ದಾರೆ. ರೆಸ್ಟೋರೆಂಟ್‌ನಿಂದ ಹೊರಬಂದು ರಾಹುಲ್ ಹಾಗೂ ಆಥಿಯಾ ಜೊತೆಯಾಗಿ ಕಾರಿನಲ್ಲಿ ತೆರಳಿದ್ದಾರೆ.

ಇದನ್ನೂ ಓದಿ: ಶತಕವೀರ ರಾಹುಲ್ ಹಿಂದೆ ಬಿದ್ದಳಾ ಈ ಬಾಲಿವುಡ್ ಸುಂದರಿ?

ಈ ಹಿಂದೆ ಕೆಎಲ್ ರಾಹುಲ್ ನಟಿ ನಿಧಿ ಅಗರ್ವಾಲ್ ಜೊತೆ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಹಾಗೂ ನಿಧಿ ಸುದ್ದಿ ಹರಿದಾಡುತ್ತಿದ್ದಂತೆ ಸ್ಪಷ್ಟನೆ ನೀಡಿದ್ದರು. ನಾವಿಬ್ಬರು ಉತ್ತಮ ಗೆಳೆಯರಾಗಿರಬಾರದೇ? ಹಲವು ವರ್ಷಗಳಿಂದ ನನಗೆ ನಿಧಿ ಅಗರ್ವಾಲ್ ಪರಿಚಯ ಎಂದು ಟ್ರೋಲಿಗರಿಗೆ ಉತ್ತರ ನೀಡಿದ್ದರು.