ಕ್ರಿಕೆಟ್ ಸೀಕ್ರೇಟ್ಸ್: ಇಂದು ಡೇಲ್ ಸ್ಟೇನ್-ಆಷಸ್ ಹೀರೋ ಬರ್ತ್’ಡೇ

Cricket Secrates June 27 Cricket Superstar Dale Steyn and Kevin Pietersen Birthday
Highlights

ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್’ಗಳ ಪೈಕಿ ಡೇಲ್ ಸ್ಟೇನ್ ಕೂಡಾ ಒಬ್ಬರು. 1983ರಲ್ಲಿ ಜನಿಸಿದ ಸ್ಪೀಡ್’ಗನ್ ಖ್ಯಾತಿಯ ಸ್ಟೇನ್’ಗಿಂದು 35ನೇ ಹುಟ್ಟುಹಬ್ಬದ ಸಂಭ್ರಮ.

ಬೆಂಗಳೂರು[ಜೂ.27]: ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ... 

ಜೂನ್ 27: ಇಂದು ಸ್ಪೀಡ್’ಗನ್-ಆಷಸ್ ಹೀರೋ ಬರ್ತ್’ಡೇ..

ಡೇಲ್ ಸ್ಟೇನ್: ಜೂನ್ 27, 1983
ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್’ಗಳ ಪೈಕಿ ಡೇಲ್ ಸ್ಟೇನ್ ಕೂಡಾ ಒಬ್ಬರು. 1983ರಲ್ಲಿ ಜನಿಸಿದ ಸ್ಪೀಡ್’ಗನ್ ಖ್ಯಾತಿಯ ಡೇಲ್ ಸ್ಟೇನ್’ಗಿಂದು 35ನೇ ಹುಟ್ಟುಹಬ್ಬದ ಸಂಭ್ರಮ.

140 ಕಿ.ಮೀ ವೇಗದಲ್ಲಿ ಕರಾರುವಕ್ಕಾದ ದಾಳಿ ನಡೆಸುವ ಛಾತಿ ಹೊಂದಿರುವ ಸ್ಟೇನ್ ಈಗಲೂ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸುವ ಸಾಮರ್ಥ್ಯ ಹೊಂದಿದ್ದಾರೆ. 86 ಟೆಸ್ಟ್ ಪಂದ್ಯಗಳಲ್ಲಿ 419 ವಿಕೆಟ್, 116 ಏಕದಿನ ಪಂದ್ಯಗಳಲ್ಲಿ 180 ವಿಕೆಟ್ ಹಾಗೂ 42 ಟಿ20 ಪಂದ್ಯಗಳಲ್ಲಿ 58 ವಿಕೆಟ್ ಕಬಳಿಸಿದ್ದಾರೆ. ಪದೇ ಪದೇ ಗಾಯದ ಸಮಸ್ಯೆ ಸ್ಟೇನ್ ಅವರನ್ನು ತಂಡದಿಂದ ಹೊರಗಿರುವಂತೆ ಮಾಡಿದೆ. 

ಇದನ್ನು ಓದಿ: ಈ ಇಬ್ಬರು ವೇಗಿಗಳು ಡೇಲ್ ಸ್ಟೇನ್ ಹೀರೋಗಳಂತೆ..!

ಐಪಿಎಲ್’ನಲ್ಲಿ ಡೆಕ್ಕನ್ ಚಾರ್ಜರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್’ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಕೆವಿನ್ ಪೀಟರ್’ಸನ್: ಜೂನ್ 27, 1980

ಆಫ್ರಿಕಾ ಮೂಲದ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್’ಸನ್’ಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ. 2005ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಆಷಸ್ ಸರಣಿ ಮೂಲಕ ಪದಾರ್ಪಣೆ ಮಾಡಿದ ಕೆಪಿ, ಆಡಿದ ಚೊಚ್ಚಲ ಪಂದ್ಯದಲ್ಲಿಯೇ 57 ರನ್ ಸಿಡಿಸಿ ಗಮನ ಸೆಳೆದಿದ್ದರು. ಜತೆಗೆ ಇಂಗ್ಲೆಂಡ್ ಸರಣಿ ಗೆಲುವು ಸಾಧಿಸುವಲ್ಲೂ ಪ್ರಮುಖ ಪಾತ್ರವಹಿಸಿದ್ದರು.

ಆಡಿದ ಚೊಚ್ಚಲ ಸರಣಿಯಲ್ಲಿಯೇ 473 ಗರಿಷ್ಠ ರನ್ ಸಿಡಿಸಿದ ಆಟಗಾರ ಎನ್ನುವ ಗೌರವಕ್ಕೂ ಪೀಟರ್’ಸನ್ ಪಾತ್ರರಾಗಿದ್ದರು. ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಪೀಟರ್’ಸನ್ 104 ಟೆಸ್ಟ್ ಪಂದ್ಯಗಳಲ್ಲಿ 8,181 ರನ್, ಏಕದಿನ ಕ್ರಿಕೆಟ್’ನಲ್ಲಿ 136 ಪಂದ್ಯಗಳನ್ನಾಡಿ 4,440 ರನ್ ಹಾಗೂ ಟಿ20 ಕ್ರಿಕೆಟ್’ನಲ್ಲಿ 37 ಪಂದ್ಯಗಳನ್ನಾಡಿ 1,176 ರನ್ ಬಾರಿಸಿದ್ದಾರೆ. 

ಇದನ್ನು ಓದಿ: ಕೆಪಿಗೆ ಟಾಂಗ್ ಕೊಟ್ಟ ಧೋನಿ!

ಐಪಿಎಲ್’ನಲ್ಲಿ ಡೆಕ್ಕನ್ ಚಾರ್ಜರ್ಸ್, ಆರ್’ಸಿಬಿ, ಡೆಲ್ಲಿ ಡೇರ್’ಡೆವಿಲ್ಸ್, ಸನ್’ರೈಸರ್ಸ್ ಹೈದರಾಬಾದ್,ರೈಸಿಂಗ್ ಪುಣೆ ಸೂಪರ್’ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

loader