ಎರಡನೇ ಪಂದ್ಯದಲ್ಲೇ ತಮ್ಮ ಮಾಜಿ ಸಹ ಆಟಗಾರ ಎಂ.ಎಸ್.ಧೋನಿ ಕಾಲೆಳೆಯಲು ಪ್ರಯತ್ನಿಸಿದ ಪೀಟರ್‌ಸನ್, ಮೊದಲ ಸ್ಲಿಪ್‌'ನಲ್ಲಿ ನಿಂತಿದ್ದ ಮನೋಜ್ ತಿವಾರಿಗೆ ಪ್ಲೇಯರ್ ಮೈಕ್ ಮೂಲಕ ‘‘ಧೋನಿಗೆ ಹೇಳು, ನಾನು ಅವರಿಗಿಂತ ಉತ್ತಮ ಗಾಲ್ಫ್ ಆಟಗಾರ ಎಂದು’’ ಅಂದರು.
ಬೆಂಗಳೂರು(ಏ.06): ಐಪಿಎಲ್ 10ನೇ ಟೂರ್ನಿಗೆ ಭರ್ಜರಿ ಆರಂಭ ದೊರಕಿದ್ದು ಇಂದು ಎರಡನೇ ಪಂದ್ಯ ನಡೆಯುತ್ತಿದೆ. ಪುಣೆ ಸೂಪರ್ ಜೈಂಟ್ಸ್ ಕೀಪರ್ ಮಹೇಂದ್ರ ಸಿಂಗ್ ಧೋನಿಯ ಕಾಲೆಳೆಯಲು ಹೋಗಿ ತಾವೇ ಅಘಾತಕ್ಕೊಳಗಾದ ಸನ್ನಿವೇಷಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ನಡುವಿನ ಪಂದ್ಯ ಸಾಕ್ಷಿಯಾಯಿತು.
2016ರ ಆವೃತ್ತಿಯಲ್ಲಿ ಪುಣೆ ತಂಡದ ಪರ ಆಡಿದ್ದ ಕೆವಿನ್ ಪೀಟರ್ಸನ್ ಈ ಬಾರಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಎರಡನೇ ಪಂದ್ಯದಲ್ಲೇ ತಮ್ಮ ಮಾಜಿ ಸಹ ಆಟಗಾರ ಎಂ.ಎಸ್.ಧೋನಿ ಕಾಲೆಳೆಯಲು ಪ್ರಯತ್ನಿಸಿದ ಪೀಟರ್ಸನ್, ಮೊದಲ ಸ್ಲಿಪ್'ನಲ್ಲಿ ನಿಂತಿದ್ದ ಮನೋಜ್ ತಿವಾರಿಗೆ ಪ್ಲೇಯರ್ ಮೈಕ್ ಮೂಲಕ ‘‘ಧೋನಿಗೆ ಹೇಳು, ನಾನು ಅವರಿಗಿಂತ ಉತ್ತಮ ಗಾಲ್ಫ್ ಆಟಗಾರ ಎಂದು’’ ಅಂದರು.
ಇದಕ್ಕೆ ಧೋನಿ ‘‘ಪೀಟರ್ಸನ್'ಗೆ ಹೇಳು, ಟೆಸ್ಟ್ನಲ್ಲಿ ಅವರೇ ನನ್ನ ಮೊದಲ ಬಲಿ’’ ಎಂದು ತಿವಾರಿಗೆ ಹೇಳಿದರು.
ಇಬ್ಬರು ಶ್ರೇಷ್ಠ ಆಟಗಾರರ ನಡುವಿನ ಕುಚೋದ್ಯ ಪ್ರೇಕ್ಷಕರ ಮನಸೆಳೆಯಿತು.
*ಧೋನಿ 2011 ಇಂಗ್ಲೆಂಡ್ ಪ್ರವಾಸದ ವೇಳೆ ಧೋನಿ ಬೌಲಿಂಗ್'ನಲ್ಲಿ ಪೀಟರ್ಸನ್'ರ ವಿಕೆಟ್ ಪಡೆದಿದ್ದರಾದರೂ, ಡಿಆರ್'ಎಸ್ ಬಳಕೆಯ ಮೂಲಕ ಪೀಟರ್ಸನ್, ತೀರ್ಪು ತಮ್ಮ ಪರ ವಾಲುವಂತೆ ಮಾಡಿಕೊಂಡಿದ್ದರು.
