ಮುಂಬೈ[ನ.02]: ವಿರಾಟ್‌ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು, ಆದರೆ ಹೋಲಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ ಎಂದು ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ಅಭಿಪ್ರಾಯಿಸಿದ್ದಾರೆ. 

ಇದನ್ನು ಓದಿ: ಕೊಹ್ಲಿ ಇರೋದೇ ತೆಂಡುಲ್ಕರ್ ದಾಖಲೆ ಮುರಿಯೋದಕ್ಕಾ..?

‘ವರ್ಷಗಳು ಉರುಳಿದಂತೆ ಕೊಹ್ಲಿ ಬೆಳೆಯುತ್ತಿರುವ ವೇಗ ಹಾಗೂ ರೀತಿ ಅಚ್ಚರಿ ಮೂಡಿಸುತ್ತದೆ. ಅವರಲ್ಲಿ ಪ್ರತಿಭೆಯಿದೆ ಎನ್ನುವುದನ್ನು ನಾನು ಸದಾ ಗಮನಿಸಿದ್ದೇನೆ. ಅವರೊಬ್ಬ ಶ್ರೇಷ್ಠ
ಕ್ರಿಕೆಟಿಗನಾಗಿ ಬೆಳೆಯುತ್ತಾರೆ ಎಂದು ನನಗೆ ಸದಾ ಅನಿಸುತ್ತಿತ್ತು. ಆದರೆ ನನ್ನೊಂದಿಗೆ ಅಥವಾ ಯಾರೊಂದಿಗೂ ಹೋಲಿಕೆ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ
ಸವಾಲುಗಳನ್ನು ಎದುರಿಸಿದ್ದಾರೆ’ ಎಂದು ಸಚಿನ್‌ ಹೇಳಿದ್ದಾರೆ.

ಇದನ್ನು ಓದಿ: 38ನೇ ಶತಕ ಸಿಡಿಸಿದ ಕಿಂಗ್ ಕೊಹ್ಲಿ ಗುಡ್ಡೆಹಾಕಿದ ದಾಖಲೆಗಳೆಷ್ಟು...?

ಪ್ರತಿಪಂದ್ಯದಲ್ಲೂ ಸಚಿನ್ ತೆಂಡುಲ್ಕರ್ ಅವರ ಒಂದಲ್ಲಾ ಒಂದು ದಾಖಲೆಗಳನ್ನು ಹಿಂದಿಕ್ಕುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಈಗಾಗಲೇ ಮಾಸ್ಟರ್ ಬ್ಲಾಸ್ಟರ್’ಗೆ ಹೋಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಚಿನ್’ಗಿಂತ ವೇಗವಾಗಿ 10 ಸಾವಿರ ರನ್ ಪೂರೈಸಿದ ಸಾಧನೆಯನ್ನು ವಿರಾಟ್ ಮಾಡಿದ್ದರು.