ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವು 283 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟದ ಹೊರತಾಗಿಯೂ ಕೇವಲ 240 ರನ್ ಗಳಿಸಲಷ್ಟೇ ಶಕ್ತವಾಯಿತು. ವಿರಾಟ್ ಕೊಹ್ಲಿ ಈ ಶತಕ ಸಿಡಿಸುವುದರೊಂದಿಗೆ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ.

ಬೆಂಗಳೂರು[ಅ.28]: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್’ನ ಸೂಪರ್’ಸ್ಟಾರ್ ಬ್ಯಾಟ್ಸ್’ಮನ್. ಕ್ರಿಕೆಟ್ ವೃತ್ತಿಜೀವನದ ಅದ್ಭುತ ಫಾರ್ಮ್’ನಲ್ಲಿರುವ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸತತ ಮೂರು ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

Add Asianetnews Kannada as a Preferred SourcegooglePreferred

ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವು 283 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟದ ಹೊರತಾಗಿಯೂ ಕೇವಲ 240 ರನ್ ಗಳಿಸಲಷ್ಟೇ ಶಕ್ತವಾಯಿತು. ವಿರಾಟ್ ಕೊಹ್ಲಿ ಈ ಶತಕ ಸಿಡಿಸುವುದರೊಂದಿಗೆ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ವಿರಾಟ್ ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 140 ರನ್ ಸಿಡಿಸಿದ್ದರೆ, ವಿಶಾಖಪಟ್ಟಣಂನಲ್ಲಿ ನಡೆದ 2ನೇ ಪಂದ್ಯದಲ್ಲಿ 157* ರನ್ ಚಚ್ಚಿದ್ದರು. ಪುಣೆಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ 107 ರನ್ ಸಿಡಿಸಿದ್ದಾರೆ.

ಪ್ರತಿಪಂದ್ಯದಲ್ಲೂ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿರುವ ದಾಖಲೆಗಳು ನಿಮ್ಮ ಮುಂದೆ.. 

1. ವಿರಾಟ್ ಕೊಹ್ಲಿ ಏಷ್ಯಾ ನೆಲದಲ್ಲಿ ಕೇವಲ 117 ಇನ್ನಿಂಗ್ಸ್’ಗಳಲ್ಲಿ 6 ಸಾವಿರ ರನ್ ಪೂರೈಸುವ ಮೂಲಕ ಅತಿ ವೇಗವಾಗಿ 6 ಸಹಸ್ರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್ 142 ಇನ್ನಿಂಗ್ಸ್’ಗಳಲ್ಲಿ 6 ಸಾವಿರ ರನ್ ಬಾರಿಸಿದ್ದರು.

2. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ ಸತತ ಮೂರು ಶತಕ ಸಿಡಿಸುವ ಮೂಲಕ ಭಾರತ ಪರ ಈ ಸಾಧನೆ ಮಾಡಿದ ಮೊದಲ ಟೀಂ ಇಂಡಿಯಾ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.

3. ಸತತ ಮೂರು ಶತಕ ಸಿಡಿಸಿದ ಮೊದಲ ಕ್ಯಾಪ್ಟನ್ ಎನ್ನುವ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ.

4. ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕರ ಬಳಿಕ ಮೂರನೇ ಕ್ರಮಾಂಕದಲ್ಲಿ 8000+ ರನ್ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್’ಮನ್ ಎನ್ನುವ ಶ್ರೇಯ ಕೊಹ್ಲಿ ಪಾಲಾಗಿದೆ.

5. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ಬಳಿಕ ಭಾರತದಲ್ಲಿ 8 ಸಾವಿರ ರನ್ ಬಾರಿಸಿದ ಮೂರನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

6. ನಿರ್ದಿಷ್ಟ ತಂಡವೊಂದರ ವಿರುದ್ಧ ಸತತ 4 ಶತಕ ಸಿಡಿಸಿದ 3ನೇ ಬ್ಯಾಟ್ಸ್’ಮನ್ ಎನ್ನುವ ದಾಖಲೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೊದಲು ಎಬಿ ಡಿವಿಲಿಯರ್ಸ್ ಹಾಗೂ ಬಾಬರ್ ಅಜಂ ಈ ಸಾಧನೆ ಮಾಡಿದ್ದಾರೆ.

7. ವಿರಾಟ್ ಕೊಹ್ಲಿ[10,183] ರನ್ ಸಿಡಸುವುದರೊಂದಿಗೆ ಭಾರತ ಪರ ಗರಿಷ್ಠ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಮೊದಲು ಧೋನಿ[10,150] 4ನೇ ಸ್ಥಾನದಲ್ಲಿದ್ದರು.