Asianet Suvarna News Asianet Suvarna News

RCB ಮತ್ತೋರ್ವ ಸ್ಟಾರ್ ಕ್ರಿಕೆಟಿಗ ಕಿಂಗ್ಸ್ XI ಪಂಜಾಬ್ ತೆಕ್ಕೆಗೆ..?

2016ರಲ್ಲಿ ಕಿಂಗ್ಸ್ ಇಲೆವೆನ್ ಸೇರಿದ್ದ ಸ್ಟೋಯ್ನಿಸ್, ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಐಪಿಎಲ್‌ನಲ್ಲಿ 19 ಪಂದ್ಯಗಳನ್ನು ಆಡಿರುವ ಅವರು, 262 ರನ್ ಕಲೆಹಾಕಿದ್ದು, 19 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಸ್ಟೋಯ್ನಿಸ್’ರನ್ನು ಕಳೆದ ಆವೃತ್ತಿಯಲ್ಲಿ ₹6.20 ಕೋಟಿ ನೀಡಿ ಕಿಂಗ್ಸ್ ಇಲೆವೆನ್ ತಂಡ ಉಳಿಸಿಕೊಂಡಿತ್ತು. 

Cricket KXIP trade Stoinis for Mandeep with RCB Says Report
Author
Bengaluru, First Published Oct 29, 2018, 3:49 PM IST

ಮುಂಬೈ[ಅ.29]: 2019ರ ಐಪಿಎಲ್‌ನಲ್ಲಿ ಕೆಲ ಹೊಸ ಮುಖಗಳು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನ್ದೀಪ್ ಸಿಂಗ್‌ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಮಾರಾಟ ಮಾಡಿರುವ ಆರ್’ಸಿಬಿ, ಆ ತಂಡದಲ್ಲಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್‌ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಎಂದು ರಾಷ್ಟ್ರೀಯ
ಮಾಧ್ಯಮಗಳು ವರದಿ ಮಾಡಿವೆ.

ಇದನ್ನು ಓದಿ: ಮುಂಬೈ ಇಂಡಿಯನ್ಸ್ ಪಾಲಾದ ಆರ್’ಸಿಬಿ ಸ್ಟಾರ್ ಆಟಗಾರ..!

2016ರಲ್ಲಿ ಕಿಂಗ್ಸ್ ಇಲೆವೆನ್ ಸೇರಿದ್ದ ಸ್ಟೋಯ್ನಿಸ್, ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಐಪಿಎಲ್‌ನಲ್ಲಿ 19 ಪಂದ್ಯಗಳನ್ನು ಆಡಿರುವ ಅವರು, 262 ರನ್ ಕಲೆಹಾಕಿದ್ದು, 19
ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಸ್ಟೋಯ್ನಿಸ್’ರನ್ನು ಕಳೆದ ಆವೃತ್ತಿಯಲ್ಲಿ ₹6.20 ಕೋಟಿ ನೀಡಿ ಕಿಂಗ್ಸ್ ಇಲೆವೆನ್ ತಂಡ ಉಳಿಸಿಕೊಂಡಿತ್ತು. 

ಮತ್ತೊಂದೆಡೆ ಮನ್ದೀಪ್ ಸಹ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ₹1.40 ಕೋಟಿಗೆ ಆರ್’ಸಿಬಿ ಸೇರಿಕೊಂಡಿದ್ದ ಮನ್ದೀಪ್ ಆಡಿದ 14 ಪಂದ್ಯಗಳಲ್ಲಿ 252 ರನ್ ಸಿಡಿಸಿದ್ದರು. ಇನ್ನು ಆರ್’ಸಿಬಿ ಒಟ್ಟು 40 ಪಂದ್ಯಗಳನ್ನಾಡಿರುವ ಮನ್ದೀಪ್ 22ರ ಸರಾಸರಿಯಲ್ಲಿ 597 ರನ್ ಸಿಡಿಸಿದ್ದರು. ಈ ಹಿಂದೆಯೂ ಅವರು ಕಿಂಗ್ಸ್ ಇಲೆವೆನ್ ಪರ ಆಡಿದ್ದರು.

ಈ ಮೊದಲು ಆರ್’ಸಿಬಿಯ ಸ್ಟಾರ್ ಕ್ರಿಕೆಟಿಗ ಕ್ವಿಂಟನ್ ಡಿ’ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ಕಡೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

Follow Us:
Download App:
  • android
  • ios