ದಕ್ಷಿಣ ಆಫ್ರಿಕಾ ಆಟಗಾರ 2019ರ ಆವೃತ್ತಿಯ ಮೊದಲ ಮಾರಾಟವಾಗಿದ್ದು, ಆರ್‌ಸಿಬಿ ತಂಡ ಅವರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದೆ. ಕಳೆದ ವರ್ಷ ₹2.8 ಕೋಟಿಗೆ ಆರ್‌ಸಿಬಿ ಡಿ ಕಾಕ್‌ರನ್ನು ಖರೀದಿಸಿತ್ತು. ಇದೀಗ ಅದೇ ಮೊತ್ತಕ್ಕೆ ಮುಂಬೈ ಖರೀದಿ ಮಾಡಿದೆ.
ಮುಂಬೈ[ಅ.20]: 2019ರ ಐಪಿಎಲ್‌ನಲ್ಲಿ ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡವನ್ನು ಪ್ರತಿನಿಧಿಸಿದ್ದ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಡಿ ಕಾಕ್ ಮುಂದಿನ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.
ದಕ್ಷಿಣ ಆಫ್ರಿಕಾ ಆಟಗಾರ 2019ರ ಆವೃತ್ತಿಯ ಮೊದಲ ಮಾರಾಟವಾಗಿದ್ದು, ಆರ್‌ಸಿಬಿ ತಂಡ ಅವರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದೆ. ಕಳೆದ ವರ್ಷ ₹2.8 ಕೋಟಿಗೆ ಆರ್‌ಸಿಬಿ ಡಿ ಕಾಕ್‌ರನ್ನು ಖರೀದಿಸಿತ್ತು. ಇದೀಗ ಅದೇ ಮೊತ್ತಕ್ಕೆ ಮುಂಬೈ ಖರೀದಿ ಮಾಡಿದೆ. ಈ ಮೊತ್ತವನ್ನು ಹೊಂದಿಸಲು ಮುಂಬೈ ಇಂಡಿಯನ್ಸ್ ತಂಡವು ಬಾಂಗ್ಲಾ ವೇಗಿ ಮುಸ್ತಾಫಿಜುರ್ (₹2.2 ಕೋಟಿ) ಹಾಗೂ ಲಂಕಾ ಸ್ಪಿನ್ನರ್ ಅಖಿಲ ಧನಂಜಯ (₹50 ಲಕ್ಷ)ರನ್ನು ತಂಡದಿಂದ ಕೈಬಿಟ್ಟಿದೆ.
ಡಿ ಕಾಕ್ ಆರ್’ಸಿಬಿ ತಂಡ ಕೂಡಿಕೊಳ್ಳುವ ಮುನ್ನ ಡೆಲ್ಲಿ ಡೇರ್’ಡೆವಿಲ್ಸ್ ಹಾಗೂ ಸನ್’ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಆರ್’ಸಿಬಿ ಪರ 8 ಪಂದ್ಯಗಳನ್ನಾಡಿ 201 ರನ್ ಬಾರಿಸಿದ್ದರು. ಇದೇ ವೇಳೆ 12ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಡಿ.16ಕ್ಕೆ ಗೋವಾದಲ್ಲಿ ನಡೆಯಲಿದೆ ಎನ್ನಲಾಗಿದೆ.
