ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ಕುರಿತು ದಿಗ್ಗಜ ಸ್ವಿಂಗ್ ವೇಗಿ, ಪಾಕಿಸ್ತಾನದ ವಾಸೀಂ ಅಕ್ರಮ್ ಶ್ಲಾಘಿಸಿದ್ದಾರೆ.  ಬುಮ್ರಾ ಕುರಿತು ಅಕ್ರಮ್ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.

ನವದೆಹಲಿ(ಜ.20): ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬೂಮ್ರಾ, ಸದ್ಯ ವಿಶ್ವದ ಶ್ರೇಷ್ಠ ಯಾರ್ಕರ್‌ ಬೌಲರ್‌ ಎಂದು ಪಾಕಿಸ್ತಾನದ ದಿಗ್ಗಜ ವೇಗಿ ವಾಸೀಂ ಅಕ್ರಮ್‌ ಅಭಿಪ್ರಾಯಿಸಿದ್ದಾರೆ. ಆಸ್ಪ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವಿನಲ್ಲಿ ಬೂಮ್ರಾ ಕೊಡುಗೆಯನ್ನು ಕೊಂಡಾಡಿರುವ ಅಕ್ರಮ್‌, ‘ಸದ್ಯ ವಿಶ್ವದ ವೇಗದ ಬೌಲರ್‌ಗಳ ಪೈಕಿ ಬೂಮ್ರಾ ಅತ್ಯಂತ ಪರಿಣಾಮಕಾರಿ ಯಾರ್ಕರ್‌ ಬೌಲರ್‌ ಆಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಎಂ.ಎಸ್.ಧೋನಿ ನಿವೃತ್ತಿ ಕುರಿತು ಕೋಚ್ ಬಾಂಗರ್ ಜೊತೆ ಹೇಳಿದ್ದೇನು?

ಅವರ ಬೌಲಿಂಗ್‌ ಶೈಲಿ ವಿಭಿನ್ನವಾಗಿದೆ. ಆದರೂ ಚೆಂಡನ್ನು ಸ್ವಿಂಗ್‌ ಮಾಡುವಲ್ಲಿ ಅವರು ಯಶಸ್ವಿಯಾಗುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ ಅದ್ಬುತ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾವಿಲ್ಲ ಎಂದು ಅಕ್ರಮ್ ಹೇಳಿದ್ದಾರೆ.

ಇದನ್ನೂ ಓದಿ: ಧೋನಿಯಷ್ಟು ಬದ್ಧತೆ ಮತ್ತ್ಯಾರಿಗೂ ಇಲ್ಲ ಎಂದ ಕೊಹ್ಲಿ

ಜಸ್‌ಪ್ರೀತ್ ಬುಮ್ರಾ ನಿಖರವಾಗಿ ಯಾರ್ಕರ್ ಬೌಲಿಂಗ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಸದ್ಯ ಟೀಂ ಇಂಡಿಯಾ ಬುಮ್ರಾ, ಭುವನೇಶ್ವರ್ ಕುಮಾರ್ ಸೇರಿದಂತೆ ಅತ್ಯುತ್ತಮ ವೇಗಿಗಳನ್ನ ಹೊಂದಿದೆ. ಹೀಗಾಗಿ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಲ್ಲೂ ಹೆಚ್ಚು ಯಶಸ್ಸು ಸಾಧಿಸಿತ್ತಿದೆ.