ವೈಜಾಗ್[ಫೆ.24]: ಟೀಂ ಇಂಡಿಯಾ ನೀಡಿರುವ ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಆಘಾತಕ್ಕೆ ಒಳಗಾಗಿದ್ದು ಕೇವಲ 5 ರನ್ ಬಾರಿಸುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದೆ.

ಆಸಿಸ್’ಗೆ ಸ್ಪರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ

ಮೊದಲ ಓವರ್’ನಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾದ ಭಾರತ ಕೇವಲ 4 ರನ್ ಬಿಟ್ಟುಕೊಟ್ಟಿತು. ಎರಡನೇ ಓವರ್’ನಲ್ಲಿ ಚಹಲ್ ಕೇವಲ ಒಂದು ರನ್ ನೀಡಿದರು. ಈ ವೇಳೆ ಇಲ್ಲದ ರನ್ ಕದಿಯಲ್ ಹೋಗಿ ಸ್ಟೋನಿಸ್ ರನೌಟ್ ಬಲೆಗೆ ಬಿದ್ದರು. ಇದಾದ ಬೆನ್ನಲ್ಲೇ ನಾಯಕ ಆ್ಯರೋನ್ ಫಿಂಚ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಬುಮ್ರಾ ಬೌಲಿಂಗ್’ನಲ್ಲಿ ಫಿಂಚ್ ಎಲ್’ಬಿ ಬಲೆಗೆ ಬಿದ್ದರು.

ಇದೀಗ ಆಸ್ಟ್ರೇಲಿಯಾ 3 ಓವರ್ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು ಕೇವಲ 9 ರನ್ ಬಾರಿಸಿದೆ. ಡಾರ್ಶಿ ಶಾರ್ಟ್ ಹಾಗೂ ಗ್ಲೇನ್ ಮ್ಯಾಕ್ಸ್’ವೆಲ್ ಕ್ರೀಸ್’ನಲ್ಲಿದ್ದಾರೆ. 

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಭಾರತ 7 ವಿಕೆಟ್ ಕಳೆದುಕೊಂಡು 126 ರನ್ ಬಾರಿಸಿತ್ತು.