ಕರಾಚಿ(ನ.01): ಆಸ್ಪ್ರೇಲಿಯಾ-ಪಾಕಿಸ್ತಾನ ನಡುವಿನ ಟಿ20 ಸರಣಿಯ ವಿಜೇತರಿಗೆ ನೀಡಲು ಸಿದ್ಧಪಡಿಸಿದ್ದ ಬಿಸ್ಕೆಟ್‌ ಆಕಾರದ ಟ್ರೋಫಿ ಸಾಮಾಜಿಕ ತಾಣಗಳಲ್ಲಿ ನಗೆಪಾಟಲಿಗೆ ಗುರಿಯಾಗಿತ್ತು. 

ಇದನ್ನು ಓದಿ: ಪಾಕ್-ಆಸೀಸ್ ಟಿ20 ಸರಣಿಗೆ ಬಿಸ್ಕೆಟ್ ಟ್ರೋಫಿ..!

ಸರಣಿಯನ್ನು 3-0 ಅಂತರದಲ್ಲಿ ಗೆದ್ದ ಪಾಕಿಸ್ತಾನಕ್ಕೆ ಈ ಟ್ರೋಫಿ ದೊರೆಯಿತು. ಅಭಿಮಾನಿಗಳು ವ್ಯಂಗ್ಯ ಮಾಡಿದ್ದರಿಂದ ಮುಜುಗರಕ್ಕೆ ಒಳಗಾದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ), ಈ ಟ್ರೋಫಿ ತಯಾರಿಸಿದ್ದರ ಹಿಂದಿನ ಉದ್ದೇಶವೇನು, ಇದು ಯಾರು ಯೋಜನೆ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆಗೆ ಆದೇಶಿಸಿದೆ. 

ಇದನ್ನು ಓದಿ: ಸತತ 10ನೇ ಟಿ20 ಸರಣಿ ಗೆದ್ದ ಪಾಕಿಸ್ತಾನ

ಇದರ ಬೆನ್ನಲ್ಲೇ ಪಿಸಿಬಿ ವಾಣಿಜ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀನಾಮೆ ಸಹ ನೀಡಿದ್ದಾರೆ ಎನ್ನಲಾಗಿದೆ. ಐಸಿಸಿ ಸಹ ಬಿಸ್ಕೆಟ್‌ ಟ್ರೋಫಿಯ ಫೋಟೋವನ್ನು ಟ್ವೀಟ್‌ ಮಾಡಿ, ಪಾಕಿಸ್ತಾನದ ಕಾಲೆಳೆದಿತ್ತು.