ಮೆಲ್ಬರ್ನ್[ಸೆ.25]: ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೂಪರ್ ಓವರ್ ಸಹ ಟೈ ಆದ ಕಾರಣ, ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಆದ ಬಳಿಕ ಐಸಿಸಿ ನಿಯಮದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ನಿಯಮವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬದಲಿಸಿದೆ.

ಸೂಪರ್ ಓವರ್ ನಿಯಮಗಳೇನು..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಬೌಂಡರಿ ನಿಯಮದ ಬದಲಿಗೆ ಪುರುಷರ ಹಾಗೂ ಮಹಿಳೆಯರ ಬಿಗ್‌ಬ್ಯಾಶ್ ಟಿ20 ಟೂರ್ನಿ ಫೈನಲ್‌ಗಳಲ್ಲಿ ಪಂದ್ಯ ಟೈ ಆಗಿ, ಸೂಪರ್ ಓವರ್ ಸಹ ಟೈ ಆದರೆ ಫಲಿತಾಂಶ ಬರುವವರೆಗೂ ಹಲವು ಸೂಪರ್ ಓವರ್‌ಗಳನ್ನು ನಡೆಸುವುದಾಗಿ ಘೋಷಿಸಿದೆ. ಲೀಗ್ ಹಂತದ ಪಂದ್ಯಗಳ ಸೂಪರ್ ಓವರ್ ಟೈ ಆದರೆ ಅಂಕ ಹಂಚಿಕೆ ಮಾಡುವುದಾಗಿ ತಿಳಿಸಿದೆ.

ವಿಶ್ವಕಪ್ ಇತಿಹಾಸದಲ್ಲೇ ರೋಚಕ ಪಂದ್ಯ; ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್!

ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಜೂನ್ 14ರಂದು ಲಾರ್ಡ್ಸ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಯಿತು. ಹೀಗಾಗಿ ಅಂಪೈರ್ ಗಳು ಫಲಿತಾಂಶಗಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್’ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಬಾರಿಸಿತು. ವಿಶ್ವಕಪ್ ಗೆಲ್ಲಲು ನ್ಯೂಜಿಲೆಂಡ್ ಒಂದು ಓವರ್’ನಲ್ಲಿ 16 ರನ್ ಬಾರಿಸಿಬೇಕಿತ್ತು. ಆದರೆ ನ್ಯೂಜಿಲೆಂಡ್ 15 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಮತ್ತೊಮ್ಮೆ ಪಂದ್ಯ ಟೈ ಆಯಿತು. ಇದಾದ ಬಳಿಕ ನಿಯಮದಂತೆ ಅತಿಹೆಚ್ಚು ಬೌಂಡರಿ ಬಾರಿಸಿದ ತಂಡವಾದ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 27 ಬೌಂಡರಿ ಬಾರಿಸಿದ್ದರೆ, ನ್ಯೂಜಿಲೆಂಡ್ ಕೇವಲ 17 ಬೌಂಡರಿಗಳನ್ನಷ್ಟೇ ಬಾರಿಸಿತ್ತು.

ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

ಐಸಿಸಿಯ ಈ ನಿಯಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಹಲವು ಕ್ರಿಕೆಟ್ ತಜ್ಞರು ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ನರು ಎಂದು ಘೋಷಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದರು.