ಏಕದಿನ ಹಾಗೂ ಟಿ20 ಕ್ರಿಕೆಟ್ ಮಾದರಿಯಲ್ಲೇ ಇದೀಗ ಟೆಸ್ಟ್ ಕ್ರಿಕೆಟ್ ಜರ್ಸಿ ಪರಿಚಯಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಟೆಸ್ಟ್ ಕ್ರಿಕೆಟ್‌ನ ಬಿಳಿ ಜರ್ಸಿ ಮೇಲೆ ನಂಬರ್ ನಮೂದಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜನೆ ತಯಾರಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ನೂತನ ಜರ್ಸಿ ವಿವರ ಇಲ್ಲಿದೆ.
ನವದೆಹಲಿ(ಮಾ.20): ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿರುವಂತೆ ಟೆಸ್ಟ್ ಕ್ರಿಕೆಟ್‌ನಲ್ಲೂ ಆಟಗಾರರಿಗೆ ಜೆರ್ಸಿ ಸಂಖ್ಯೆ ನೀಡಲು ಪ್ರಸ್ತಾಪಿಸಲಾಗಿದೆ. ಈ ವರ್ಷ ಆರಂಭಗೊಳ್ಳಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಜೆರ್ಸಿ ಸಂಖ್ಯೆಗಳನ್ನು ಪರಿಚಯಿಸಲು ಚಿಂತನೆ ನಡೆಸಲಾಗಿದೆ ಎಂದು ಕ್ರಿಕೆಟ್ ಆಸ್ಪ್ರೇಲಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸುದ್ದಿ ಪ್ರಕಟಿಸಿದೆ.
ಇದನ್ನೂ ಓದಿ: ವಿಶ್ವಕಪ್ 2019: ಟಿಕೆಟ್ ಮಾರಾಟ ದಿನಾಂಕ ಬಹಿರಂಗ ಪಡಿಸಿದ ICC
ಆಗಸ್ಟ್‌ನಲ್ಲಿ ನಡೆಯಲಿರುವ ಆ್ಯಷಸ್ ಸರಣಿ ವೇಳೆ ಮೊದಲ ಬಾರಿಗೆ ಈ ಪ್ರಯೋಗ ನಡೆಯುವ ಸಾಧ್ಯತೆ ಇದೆ. ಕ್ರಿಕೆಟ್ ಆಸ್ಪ್ರೇಲಿಯಾದ ಕಾರ್ಯಾಚರಣೆಗಳ ಇಲಾಖೆ ಆಟಗಾರರಿಗೆ ಸಂಖ್ಯೆಯುಳ್ಳ ಜೆರ್ಸಿಗಳನ್ನು ತಯಾರು ಮಾಡಲು ಯೋಜನೆ ರೂಪಿಸುತ್ತಿದೆ.
ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ನ ದೇಸಿ ಪ್ರಥಮ ದರ್ಜೆ ಪಂದ್ಯಗಳಿಗೆ ಆಟಗಾರರು ಸಂಖ್ಯೆಯುಳ್ಳ ಜೆರ್ಸಿಗಳನ್ನು ತೊಡುತ್ತಾರೆ. ಜೆರ್ಸಿಯ ಹಿಂಭಾಗದಲ್ಲಿ ಸಂಖ್ಯೆ ಮುದ್ರಿಸಲಾಗಿರುತ್ತದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಪದ್ಧತಿ ಬಳಕೆಯಲ್ಲಿಲ್ಲ. ಪ್ರತಿ ಆಟಗಾರನ ಟೆಸ್ಟ್ ಕ್ಯಾಪ್ ಸಂಖ್ಯೆಯನ್ನು ಎದೆ ಭಾಗದಲ್ಲಿ ಮುದ್ರಿಸಲಾಗಿರುತ್ತದೆ. ಭಾರತ ಸೇರಿದಂತೆ ಕೆಲ ದೇಶಗಳ ಆಟಗಾರರ ಜೆರ್ಸಿಗಳ ಮೇಲೆ ಮೊದಲಕ್ಷರಗಳನ್ನು ಹಾಕಾಲಾಗಿರುತ್ತದೆ.
ಇದನ್ನೂ ಓದಿ: ಬಿಸಿಸಿಐಗೆ 11 ಕೋಟಿ ರುಪಾಯಿ ಪರಿಹಾರ ನೀಡಿದ ಪಾಕ್!
ಕೆಲ ಹಾಲಿ ಹಾಗೂ ಮಾಜಿ ಆಟಗಾರರು ಈ ಪ್ರಸ್ತಾಪವನ್ನು ಸ್ವಾಗತಿಸಿದ್ದಾರೆ. ಸಂಖ್ಯೆಯುಳ್ಳ ಜೆರ್ಸಿ ತೊಟ್ಟರೆ ಅಭಿಮಾನಿಗಳಿಗೆ ಆಟಗಾರರನ್ನು ಗುರುತಿಸಲು ಸುಲಭವಾಗಲಿದೆ ಆಸ್ಪ್ರೇಲಿಯಾ ಕ್ರಿಕೆಟಿಗ ಟ್ರ್ಯಾವಿಸ್ ಹೆಡ್ ಹೇಳಿದ್ದಾರೆ. ಇನ್ನೂ ಕೆಲವರು ಸಾಂಪ್ರದಾಯಿಕ ಬಿಳಿ ಉಡುಗೆ ಮೇಲೆ ಸಂಖ್ಯೆ ಮುದ್ರಿಸುವುದನ್ನು ವಿರೋಧಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 20, 2019, 8:55 AM IST