ಕರಾಚಿ[ಮಾ.19]: ದ್ವಿಪಕ್ಷೀಯ ಒಪ್ಪಂದ ಮುರಿಯಲಾಗಿದೆ ಎಂದು ಆರೋಪಿಸಿ ಬಿಸಿಸಿಐ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಗೆ ದೂರು ಸಲ್ಲಿಸಿ ಮುಖಭಂಗಕ್ಕೊಳಗಾಗಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ), ಬಿಸಿಸಿಐಗೆ 1.6 ಮಿಲಿಯನ್‌ ಡಾಲರ್‌ (10.98 ಕೋಟಿ ರುಪಾಯಿ) ಪರಿಹಾರ ನೀಡಿದೆ. ಪಿಸಿಬಿ ಅಧ್ಯಕ್ಷ ಇಹ್ಸಾನ್‌ ಮಣಿ ಸೋಮವಾರ ಈ ವಿಷಯನ್ನು ಬಹಿರಂಗ ಪಡಿಸಿದರು.

BCCI ಬಳಿ 447ಕೋಟಿ ಪರಿಹಾರ ಕೇಳಿ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ!

2015ರಿಂದ 2023ರ ವರೆಗೂ 6 ದ್ವಿಪಕ್ಷೀಯ ಸರಣಿಗಳನ್ನು ಆಡುತ್ತೇವೆ ಎಂದು ಮಾಡಿಕೊಂಡ ಒಪ್ಪಂದವನ್ನು ಬಿಸಿಸಿಐ ಉಲ್ಲಂಘಿಸಿದೆ ಎಂದು ಆರೋಪಿಸಿ, ಪಿಸಿಬಿ ಐಸಿಸಿಗೆ ದೂರು ದಾಖಲಿಸಿತ್ತು. ಜತೆಗೆ 480 ಕೋಟಿ ರುಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. 

ಆರ್ಮಿ ಕ್ಯಾಪ್: ಪಾಕ್ ಕ್ಯಾತೆಗೆ ಐಸಿಸಿ ಛೀಮಾರಿ

ವಿಚಾರಣೆ ನಡೆಸಿದ ಐಸಿಸಿಯ ವಿವಾದ ನಿರ್ಣಯ ಸಮಿತಿ, ಪಾಕ್‌ ಬೇಡಿಕೆಯನ್ನು ತಿರಸ್ಕರಿಸಿತ್ತು. ವಿಚಾರಣೆ ವೇಳೆ ಸರಣಿ ಆಡುವುದಾಗಿ ಪ್ರಸ್ತಾಪಿಸಲಾಗಿತ್ತೇ ಹೊರತು ಒಪ್ಪಂದ ಮಾಡಿಕೊಂಡಿರಲಿಲ್ಲ ಎಂದು ಬಿಸಿಸಿಐ ಸಾಬೀತು ಪಡಿಸಿ, ಪ್ರಕರಣ ಜಯಿಸಿತ್ತು.