Asianet Suvarna News Asianet Suvarna News

ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಏಕದಿನ ತಂಡಕ್ಕೆ ಕೊಹ್ಲಿ ನಾಯಕ!

ಕ್ರಿಕೆಟ್ ಆಸ್ಟ್ರೇಲಿಯಾ ವರ್ಷದ ಏಕದಿನ ತಂಡ ಪ್ರಕಟಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಿದ್ದರೆ, ಇನ್ನೂ ಮೂವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಏಕದಿನ ತಂಡದಲ್ಲಿರುವ ಭಾರತೀಯರು ಯಾರು? ಇಲ್ಲಿದೆ.
 

Cricket Australia announces ODI team of the year Virat kohli lead the team
Author
Bengaluru, First Published Dec 31, 2018, 8:32 PM IST
  • Facebook
  • Twitter
  • Whatsapp

ಸಿಡ್ನಿ(ಡಿ.31): ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯಲ್ಲಿ ಯಶಸ್ವಿಯಾಗಿರುವ ನಾಯಕ ವಿರಾಟ್ ಕೊಹ್ಲಿ 2018ರಲ್ಲಿ ಗರಿಷ್ಠ ಅಂತಾರಾಷ್ಟ್ರೀಯ ರನ್ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ವರ್ಷದ ಏಕದಿನ ತಂಡ ಪ್ರಕಟಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಾಯಕತ್ವ ಗೌರವ ನೀಡಲಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಶುಭಾಶಯ ಕೋರಿದ ವಿರಾಟ್ ಕೊಹ್ಲಿ!

2018ರಲ್ಲಿ ಕೊಹ್ಲಿ 14 ಏಕದಿನ ಪಂದ್ಯಿಂದ 1200 ರನ್ ಸಿಡಿಸಿದ್ದಾರೆ. 133.55 ಸರಾಸರಿಯಲ್ಲಿ ಕೊಹ್ಲಿ ಬ್ಯಾಟ್ ಬೀಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 3 ಅರ್ಧಶತಗಳು ಸೇರಿವೆ. ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ನಾಯಕನಾಗಿರುವ ಕೊಹ್ಲಿಗೆ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಗೌರವ ನೀಡಿದೆ.

ಇದನ್ನೂ ಓದಿ: ಬಿಯರ್ ಕುಡಿಯುತ್ತಾ ಬಸ್ ಇಳಿದ ಶಾಸ್ತ್ರಿ: ಟ್ವಿಟರಿಗರಿಂದ ಫುಲ್ ಕ್ಲಾಸ್

ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಏಕದಿನ ತಂಡದಲ್ಲಿ ಕೊಹ್ಲಿ ನಾಯಕನಾಗಿದ್ದರೆ, ಮತ್ತೊರ್ವ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಕೊಹ್ಲಿ 19 ಪಂದ್ಯಗಳಿಂದ 1030 ರನ್ ಭಾರಿಸಿದ್ದಾರೆ. ಇನ್ನು ವೇಗಿಗಳಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.
 

Follow Us:
Download App:
  • android
  • ios