ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದ ಸಂತಸದಲ್ಲಿದ್ದ ತಂಡದೊಂದಿಗೆ ಹೋಟೆಲ್‌ಗೆ ಆಗಮಿಸಿದ ರವಿಶಾಸ್ತ್ರಿ, ಬಸ್‌ನಿಂದ ಇಳಿಯುವಾಗಲೇ ಬಿಯರ್ ಬಾಟಲಿಯನ್ನು ಕೈಯಲ್ಲಿ ಹಿಡಿದೆ ಕೆಳಗಿಳಿದರು. ಸಾರ್ವಜನಿಕವಾಗಿ ಎಲ್ಲರೆದುರೇ ಒಂದು ಸಿಪ್ ಸಹ ಸೇವಿಸಿ ಮುಂದೆ ಸಾಗಿದರು.
ಮೆಲ್ಬರ್ನ್(ಡಿ.31): ಇತ್ತ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ ಸಂತಸದಲ್ಲಿ ಟೀಂ ಇಂಡಿಯಾ ಇದ್ದರೆ, ಕೋಚ್ ರವಿಶಾಸ್ತ್ರಿ ವಿವಾದಕ್ಕೆ ಸಿಲುಕಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದ ಸಂತಸದಲ್ಲಿದ್ದ ತಂಡದೊಂದಿಗೆ ಹೋಟೆಲ್‌ಗೆ ಆಗಮಿಸಿದ ರವಿಶಾಸ್ತ್ರಿ, ಬಸ್‌ನಿಂದ ಇಳಿಯುವಾಗಲೇ ಬಿಯರ್ ಬಾಟಲಿಯನ್ನು ಕೈಯಲ್ಲಿ ಹಿಡಿದೆ ಕೆಳಗಿಳಿದರು. ಸಾರ್ವಜನಿಕವಾಗಿ ಎಲ್ಲರೆದುರೇ ಒಂದು ಸಿಪ್ ಸಹ ಸೇವಿಸಿ ಮುಂದೆ ಸಾಗಿದರು.
ರವಿಶಾಸ್ತ್ರಿ ಮದ್ಯ ಸೇವಿಸುವ ವಿಡಿಯೋ ಭಾರೀ ವೈರಲ್ ಆಗಿದ್ದು, ಅನೇಕರು ರವಿಶಾಸ್ತ್ರಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.