ಕಿಂಗ್‌ಸ್ಟನ್‌(ಸೆ.15): ಕೆರಿ​ಬಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಸಿ​ಪಿ​ಎಲ್‌) 2019ರ ಆವೃ​ತ್ತಿ​ಯಲ್ಲಿ ಶಾರೂಕ್ ಖಾನ್ ಒಡೆತನದ ಟ್ರಿನಿ​ಬಾಗೋ ನೈಟ್‌ರೈಡ​ರ್ಸ್ (ಟಿ​ಕೆಆರ್‌) ತಂಡ ಶುಕ್ರ​ವಾರ ಹೊಸ ದಾಖಲೆ ಬರೆ​ಯಿತು. 

ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!

ಜಮೈಕಾ ತಲ್ಹ​ವಾಸ್‌ ತಂಡದ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಹಾಲಿ ಚಾಂಪಿಯನ್ ಟಿಕೆಆರ್‌, 20 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 267 ರನ್‌ ಸಿಡಿ​ಸಿತು. ಫ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ತಂಡ​ವೊಂದು ದಾಖ​ಲಿ​ಸಿದ ಅತ್ಯ​ಧಿಕ ಮೊತ್ತವಿದು. ಒಟ್ಟಾರೆ ಟಿ20ಯಲ್ಲಿ 3ನೇ ಗರಿಷ್ಠ ಮೊತ್ತ. ಕಾಲಿನ್ ಮನ್ರೋ 50 ಎಸೆತಗಳಲ್ಲಿ 96 ರನ್ ಸಿಡಿಸಿದರೆಮ ಲಿಂಡ್ಲೆ ಸಿಮೊನ್ಸ್ 42 ಎಸೆತದಲ್ಲಿ 86 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ನಾಯಕ ಕಿರನ್ ಪೊಲ್ಲಾರ್ಡ್ 17 ಅಜೇಯ 45 ರನ್ ಸಿಡಿಸುವ ಮೂಲಕ ಬೃಹತ್ ಮೊತ್ತ ಬಾರಿಸಲು ನೆರವಾದರು.  

ಭಾರತ-ಸೌತ್ ಆಫ್ರಿಕಾ ಸರಣಿ; ಯಾರು ಮರೆತಿಲ್ಲ 4 ಅತಿ ದೊಡ್ಡ ವಿವಾದ!

2013ರಲ್ಲಿ ಪುಣೆ ವಾರಿ​ಯ​ರ್ಸ್ ವಿರುದ್ಧ ರಾಯಲ್‌ ಚಾಲೆಂಜ​ರ್ಸ್ ಬೆಂಗ​ಳೂರು ತಂಡ 5 ವಿಕೆಟ್‌ಗೆ 263 ರನ್‌ ಗಳಿ​ಸಿದ್ದು ಈ ವರೆ​ಗಿನ ದಾಖ​ಲಾ​ಗಿತ್ತು. ಐರ್ಲೆಂಡ್‌ ವಿರುದ್ಧ 278 ರನ್‌ ಸಿಡಿ​ಸಿದ್ದ ಆಫ್ಘಾ​ನಿ​ಸ್ತಾನ, ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತದ ದಾಖಲೆ ಹೊಂದಿದೆ.