ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಆಗಿರುವ ಆ್ಯಂಡರ್'ಸನ್, ಎರಡು ಬಾರಿ 2008(ಮಲೇಷ್ಯಾ) ಹಾಗೂ 2010(ನ್ಯೂಜಿಲೆಂಡ್) 19ವರ್ಷದೊಳಗಿನ ವಿಶ್ವಕಪ್'ನಲ್ಲಿ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದರು.

ದುಬೈ(ಅ.06): ಮುಂದಿನ ವರ್ಷ ನಡೆಯಲಿರುವ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್‌ಗೆ ನ್ಯೂಜಿಲೆಂಡ್‌ನ ಆಲ್ರೌಂಡರ್ ಕೋರಿ ಆ್ಯಂಡರ್‌ಸನ್ ಅವರನ್ನು ರಾಯಭಾರಿ ಯನ್ನಾಗಿ ನೇಮಕ ಮಾಡಲಾಗಿದೆ ಎಂದು ಐಸಿಸಿ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯೂಜಿಲೆಂಡ್ ಆತಿಥ್ಯ ವಹಿಸಲಿರುವ ಈ ಕಿರಿಯರ ವಿಶ್ವಕಪ್‌'ನಲ್ಲಿ 16 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, 2018ರ ಜ.13ರಂದು ಚಾಲನೆ ಸಿಗಲಿದೆ. ನ್ಯೂಜಿಲೆಂಡ್'ನ 4 ನಗರಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದೆ.

ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಆಗಿರುವ ಆ್ಯಂಡರ್'ಸನ್, ಎರಡು ಬಾರಿ 2008(ಮಲೇಷ್ಯಾ) ಹಾಗೂ 2010(ನ್ಯೂಜಿಲೆಂಡ್) 19ವರ್ಷದೊಳಗಿನ ವಿಶ್ವಕಪ್'ನಲ್ಲಿ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದರು.