ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋವನ್ನು ಅಪ್ ಲೋಡ್ ಮಾಡಿ ವಿವಾದಕ್ಕೀಡಾಗಿದ್ದಾರೆ. ಇದು ಬೌದ್ಧರು ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಫೋಟೋ ಕುರಿತಂತೆ ಇನ್ ಸ್ಟ್ರಾಗ್ರಮ್ ನಲ್ಲಿ ಸಾವಿರಾರು ಜನರು ರೊನಾಲ್ಡೋ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜತೆಗೆ ರೊನಾಲ್ಡೋ ಕ್ಷಮಾಪಣೆಗೆ ಆಗ್ರಹಿಸುತ್ತಿದ್ದಾರೆ.

ನವದೆಹಲಿ(ಅ.24): ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋವನ್ನು ಅಪ್ ಲೋಡ್ ಮಾಡಿ ವಿವಾದಕ್ಕೀಡಾಗಿದ್ದಾರೆ. 

ಇದು ಬೌದ್ಧರು ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಫೋಟೋ ಕುರಿತಂತೆ ಇನ್ ಸ್ಟ್ರಾಗ್ರಮ್ ನಲ್ಲಿ ಸಾವಿರಾರು ಜನರು ರೊನಾಲ್ಡೋ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜತೆಗೆ ರೊನಾಲ್ಡೋ ಕ್ಷಮಾಪಣೆಗೆ ಆಗ್ರಹಿಸುತ್ತಿದ್ದಾರೆ.

ರೊನಾಲ್ಡೋ ಅಭಿಮಾನಿಯೊಬ್ಬ ನೀವು ಮೊದಲು ಬುದ್ಧನಿಗೆ ಗೌರವ ಕೊಡುವುದನ್ನು ಕಲಿಯಬೇಕು ಅಂತಾ ಕಾಮೆಂಟ್ ಹಾಕಿದ್ದಾನೆ.