ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಭಾರತೀಯ ಜೋಡಿ ಶುಕ್ರವಾರ 46 ನಿಮಿಷಗಳ ಕಾಲ ನಡೆದ ರೋಚಕ ಕ್ವಾರ್ಟರ್‌ ಫೈನಲ್‌ನಲ್ಲಿ ಇಂಡೋನೇಷ್ಯಾದ ಲಿಯೋ ರ್‍ಯಾಲಿ-ಡೇನಿಯಲ್‌ ಮಾರ್ಟಿನ್‌ ಜೋಡಿ ವಿರುದ್ಧ 21-16, 21-14ರಲ್ಲಿ ಗೆಲುವು ಸಾಧಿಸಿತು.

ಶೆನ್‌ಝೆನ್‌(ಚೀನಾ): ಇಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಭಾರತೀಯ ಜೋಡಿ ಶುಕ್ರವಾರ 46 ನಿಮಿಷಗಳ ಕಾಲ ನಡೆದ ರೋಚಕ ಕ್ವಾರ್ಟರ್‌ ಫೈನಲ್‌ನಲ್ಲಿ ಇಂಡೋನೇಷ್ಯಾದ ಲಿಯೋ ರ್‍ಯಾಲಿ-ಡೇನಿಯಲ್‌ ಮಾರ್ಟಿನ್‌ ಜೋಡಿ ವಿರುದ್ಧ 21-16, 21-14ರಲ್ಲಿ ಗೆಲುವು ಸಾಧಿಸಿತು. ಈ ವರ್ಷ ಇಂಡೋನೇಷ್ಯಾ ಸೂಪರ್ 1000, ಕೊರಿಯಾ ಸೂಪರ್‌ 500, ಸ್ವಿಸ್‌ ಸೂಪರ್‌ 300 ಟೂರ್ನಿ ಗೆದ್ದಿರುವ ಸಾತ್ವಿಕ್‌-ಚಿರಾಗ್‌ ಸೆಮೀಸ್‌ನಲ್ಲಿ ಚೀನಾದ ಹಿ ಜಿ ತಿಂಗ್‌-ರೆನ್‌ ಕ್ಷಿಯಾಂಗ್‌ ವಿರುದ್ಧ ಸೆಣಸಲಿದ್ದಾರೆ.

ಪ್ರಣಯ್‌ಗೆ ಸೋಲು: ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಭರವಸೆ ಮೂಡಿಸಿದ್ದ ವಿಶ್ವ ನಂ.5 ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ನಲ್ಲಿ ಸೋಲುಂಡರು. ಅವರಿಗೆ ಜಪಾನ್‌ನ ಕೊಡಾಯಿ ನರೋಕಾ ವಿರುದ್ಧ 9-21, 14-21ರಲ್ಲಿ ಸೋಲು ಎದುರಾಯಿತು.

ಎಐಎಫ್‌ಎಫ್‌ ಯೂತ್‌ ಲೀಗ್‌ ಮುಂದಿನ ತಿಂಗಳು ಆರಂಭ

ನವದೆಹಲಿ: ಅಂಡರ್‌-17 ಫುಟ್‌ಬಾಲ್‌ ಟೂರ್ನಿಯನ್ನು ಮುಂಬರುವ ಡಿಸೆಂಬರ್‌ 2ನೇ ವಾರ ಪ್ರಾರಂಭಿಸಲಾಗುವುದು ಎಂದು ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ತಿಳಿಸಿದೆ. ಟೂರ್ನಿಯಲ್ಲಿ ಒಟ್ಟು 50 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಸದ್ಯ ಅಂಡರ್‌-17 ವಿಭಾಗದಲ್ಲಿ ಟೂರ್ನಿ ಆಯೋಜಿಸಲಿದ್ದು, ಬಳಿಕ ಅಂಡರ್‌-15 ಮತ್ತು ಅಂಡರ್‌-13 ವಿಭಾಗಗಳ ಟೂರ್ನಿಗಳನ್ನೂ ನಡೆಸಲಾಗುವುದು ಎಂದು ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ತಿಳಿಸಿದ್ದಾರೆ. ‘ಈ ವರ್ಷ ಟೂರ್ನಿ ಪ್ರಾರಂಭಿಸಲು ಸ್ವಲ್ಪ ತಡವಾಗಿದೆ. ಮುಂದಿನ 3 ವರ್ಷಗಳಲ್ಲಿ ಕಿರಿಯ ಮತ್ತು ಅತಿ ಕಿರಿಯರ ರಾಷ್ಟ್ರಮಟ್ಟದ ಫುಟ್ಬಾಲ್‌ ಟೂರ್ನಿಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Vijay Hazare Trophy: ಇಂದು ಕರ್ನಾಟಕ vs ಉತ್ತರಖಂಡ ಫೈಟ್

ಡೋಪ್‌ ಟೆಸ್ಟ್‌ನಲ್ಲಿ ರಚನಾ ಫೇಲ್‌: ತಾತ್ಕಾಲಿಕ ನಿಷೇಧ

ನವದೆಹಲಿ: ಹ್ಯಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಹ್ಯಾಮರ್‌ ಥ್ರೋ ಸ್ಪರ್ಧಿ ರಚನಾ ಕುಮಾರಿ ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲವಾಗಿದ್ದು, ತಾತ್ಕಾಲಿಕ ನಿಷೇಧಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಂಸ್ಥೆಯ ಅಥ್ಲೆಟಿಕ್ಸ್‌ ಸಮಗ್ರತೆ ಯುನಿಟ್‌(ಎಐಯು) ನಡೆಸಿದ ಡೋಪಿಂಗ್‌ ಪರೀಕ್ಷೆಯಲ್ಲಿ, ರಚನಾ ನಿಷೇಧಿತ ಮದ್ದು ಸೇವಿಸಿದ್ದು ಪತ್ತೆಯಾಗಿತ್ತು.

ನಾವು ಯಾರಿಗೂ ಕಮ್ಮಿ ಇಲ್ಲ, ಭಾರತಕ್ಕೆ ಕೀರ್ತಿ ತಂದ ಟಾಪ್ 10 ಮಹಿಳಾ ಬಾಡಿಬಿಲ್ಡರ್‌ಗಳ ಪಟ್ಟಿ

ಶೂಟಿಂಗ್‌ ವಿಶ್ವಕಪ್‌: ಕಂಚು ಪಡೆದ ಭಾರತದ ಅನೀಶ್‌

ದೋಹಾ: ಭಾರತದ ತಾರಾ ಶೂಟರ್‌ ಅನೀಶ್‌ ಭನ್ವಾಲಾ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ ಫೈನಲ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಶುಕ್ರವಾರ ಅವರು ಪುರುಷರ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. 21 ವರ್ಷದ ಅನೀಶ್‌ ಫೈನಲ್‌ನಲ್ಲಿ 27 ಅಂಕ ಸಂಪಾದಿಸಿದರು.