ಕಾಶ್ಮೀರ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದ ಮಯಾಂಕ್‌ ಹಾಗೂ ಸಿದ್ಧಾರ್ಥ್‌ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದು, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ ಅವಕಾಶವನ್ನು ಬಾಚಿಕೊಳ್ಳುತ್ತಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ವಿದ್ವತ್ ಕಾವೇರಪ್ಪ, ವೈಶಾಖ್‌, ವಾಸುಕಿ ಕೌಶಿಕ್‌, ಸುಚಿತ್‌, ಗೌತಮ್‌ ಎದುರಾಳಿಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.

ಅಹಮದಾಬಾದ್‌(ನ.25): ಜಮ್ಮು-ಕಾಶ್ಮೀರ ವಿರುದ್ಧದ ಬೃಹತ್‌ ಗೆಲುವಿನ ಹುಮ್ಮಸ್ಸಿನಲ್ಲಿರುವ 2 ಬಾರಿ ಚಾಂಪಿಯನ್‌ ಕರ್ನಾಟಕ, 2023-2ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದು, ಶನಿವಾರ ಉತ್ತರಾಖಂಡ ಸವಾಲು ಎದುರಿಸಲಿದೆ.

2019-20ರ ಬಳಿಕ ಎದುರಿಸುತ್ತಿರುವ ಪ್ರಶಸ್ತಿ ಬರವನ್ನು ನೀಗಿಸುವ ನಿಟ್ಟಿನಲ್ಲಿ ಈ ಸಲ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಮಯಾಂಗ್‌ ಅಗರ್‌ವಾಲ್‌ ನಾಯಕತ್ವದ ಕರ್ನಾಟಕ ಆರಂಭಿಕ ಪಂದ್ಯದಲ್ಲಿ ಕಾಶ್ಮೀರವನ್ನು 222 ರನ್‌ಗಳಿಂದ ಬಗ್ಗುಬಡಿದಿದೆ. ಇದರೊಂದಿಗೆ ರಾಜ್ಯತಂಡ ಉತ್ತಮ ನೆಟ್‌ ರನ್‌ರೇಟ್‌ನೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಮತ್ತೊಂದು ಜಯದ ಮೂಲಕ ನಂ.1 ಸ್ಥಾನದಲ್ಲೇ ಮುಂದುವರಿಯುವ ಕಾತರದಲ್ಲಿದೆ.

ರಾಹುಲ್‌ ದ್ರಾವಿಡ್‌ ಕೋಚ್‌ ಅವಧಿ ಅಂತ್ಯಗೊಂಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಟಿ ಆದಿತಿ ದ್ರಾವಿಡ್‌!

ಕಾಶ್ಮೀರ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದ ಮಯಾಂಕ್‌ ಹಾಗೂ ಸಿದ್ಧಾರ್ಥ್‌ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದು, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ ಅವಕಾಶವನ್ನು ಬಾಚಿಕೊಳ್ಳುತ್ತಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ವಿದ್ವತ್ ಕಾವೇರಪ್ಪ, ವೈಶಾಖ್‌, ವಾಸುಕಿ ಕೌಶಿಕ್‌, ಸುಚಿತ್‌, ಗೌತಮ್‌ ಎದುರಾಳಿಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.

ಮತ್ತೊಂದೆಡೆ ಉತ್ತರಾಖಂಡ ಆರಂಭಿಕ ಪಂದ್ಯದಲ್ಲಿ ಹರ್ಯಾಣ ವಿರುದ್ಧ 6 ವಿಕೆಟ್‌ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಈ ಬಾರಿ ಕರ್ನಾಟಕಕ್ಕೆ ಶಾಕ್‌ ನೀಡುವ ಮೂಲಕ ಗೆಲುವಿನ ಹಾದಿ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.

ಪಂದ್ಯ: ಬೆಳಗ್ಗೆ 9ಕ್ಕೆ

ವೈವಾಹಿನ ಜೀವನಕ್ಕೆ ಕಾಲಿಟ್ಟ ಭಾರತೀಯ ವೇಗಿ ನವ್‌ದೀಪ್‌

ಟೀಂ ಇಂಡಿಯಾದ ಯುವ ವೇಗಿ ನವ್‌ದೀಪ್‌ ಸೈನಿ ಗುರುವಾರ ತಮ್ಮ ಬಹುಕಾಲದ ಪ್ರೇಯಸಿ ಸ್ವಾತಿ ಆಸ್ತಾನ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಹರ್ಯಾಣದ ನವ್‌ದೀಪ್‌ ವಿವಾಹದ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ರಶೀದ್‌ ಖಾನ್‌

ಲಂಡನ್: ಆಫ್ಘಾನಿಸ್ತಾನದ ತಾರಾ ಆಟಗಾರ ರಶೀದ್‌ ಖಾನ್‌ ಬೆನ್ನಿನ ಕೆಳ ಭಾಗದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಹೀಗಾಗಿ ಡಿ.7ರಿಂದ ಆರಂಭಗೊಳ್ಳಲಿರುವ ಬಿಗ್‌ಬ್ಯಾಶ್ ಟಿ20 ಲೀಗ್‌ನಿಂದ ಹೊರಗುಳಿಯಲಿದ್ದಾರೆ. ರಶೀದ್‌ 2017ರಿಂದ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದಲ್ಲಿ ಆಡುತ್ತಿದ್ದರು.