Chess World Cup 2023: ಐತಿಹಾಸಿಕ ಸೆಮೀಸ್‌ಗೆ ಲಗ್ಗೆ ಇಟ್ಟ ಪ್ರಜ್ಞಾನಂದ!
ಗುರುವಾರ ಅತಿ ರೋಚಕ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದವರೇ ಆದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್ ಡೆತ್‌ನಲ್ಲಿ ಪ್ರಜ್ಞಾನಂದ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಅವರಿಗೆ ವಿಶ್ವ ನಂ.2, ಅಮೆರಿಕದ ಫ್ಯಾಬಿಯಾನೋ ಕರುವಾನಾ ಸವಾಲು ಎದುರಾಗಲಿದೆ.
ಬಾಕು(ಅಜರ್‌ಬೈಜಾನ್): ಫಿಡೆ ಚೆಸ್ ವಿಶ್ವಕಪ್‌ನಲ್ಲಿ 2 ದಶಕಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಯುವ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಪಾತ್ರರಾಗಿದ್ದಾರೆ. 2002ರಲ್ಲಿ ವಿಶ್ವನಾಥನ್ ಆನಂದ್ ವಿಶ್ವ ಚಾಂಪಿಯನ್ ಆಗಿದ್ದರು. 21 ವರ್ಷಗಳ ಬಳಿಕ 18ರ ಪ್ರಜ್ಞಾನಂದಗೆ ಆ ಅವಕಾಶ ಸಿಕ್ಕಿದೆ.
ಗುರುವಾರ ಅತಿ ರೋಚಕ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದವರೇ ಆದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್ ಡೆತ್‌ನಲ್ಲಿ ಪ್ರಜ್ಞಾನಂದ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಅವರಿಗೆ ವಿಶ್ವ ನಂ.2, ಅಮೆರಿಕದ ಫ್ಯಾಬಿಯಾನೋ ಕರುವಾನಾ ಸವಾಲು ಎದುರಾಗಲಿದೆ.
ಬುಧವಾರ ಪ್ರಜ್ಞಾನಂದ ಹಾಗೂ ಅರ್ಜುನ್ ನಡುವಿನ ಕ್ವಾರ್ಟರ್ ಪಂದ್ಯ 1-1 ಸಮಬಲಗೊಂಡ ಕಾರಣ ಗುರುವಾರ ಟೈ ಬ್ರೇಕರ್ ಆಡಿಸಲಾಯಿತು. ಆದರೆ ಟೈ ಬ್ರೇಕರ್‌ನ ಮೊದಲೆರಡು ಸುತ್ತಿನ ಪಂದ್ಯಗಳೂ ಡ್ರಾಗೊಂಡವು. ಹೀಗಾಗಿ ಸಮಯ ನಿಗದಿಪಡಿಸಿ ಮತ್ತೆರಡು ಸುತ್ತಿನ ಪಂದ್ಯಗಳನ್ನು ಆಡಿಸಲಾಯಿತು. ಇದರಲ್ಲೂ ಕೂಡಾ ಇಬ್ಬರೂ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಮತ್ತೆ 2 ಗೇಮ್‌ಗಳನ್ನು ನಡೆಸಲಾಯಿತು. ಈ ಬಾರಿಯೂ ಇಬ್ಬರ ನಡುವಿನ ಪೈಪೋಟಿ ಜಾಸ್ತಿಯಾಯಿಯೇ ಹೊರತು ಗೆಲುವು-ಸೋಲು ನಿರ್ಧಾರವಾಗಲಿಲ್ಲ. 6 ಗೇಮ್‌ಗಳ ಬಳಿಕ ಫಲಿತಾಂಶ ಹೊರಬೀಳದ ಕಾರಣ ಸಡನ್ ಡೆತ್ ಮೊರೆ ಹೋಗಲಾಯಿತು. ಅಂತಿಮವಾಗಿ ಅರ್ಜುನ್‌ರನ್ನು ಮಣಿಸಿದ ಪ್ರಜ್ಞಾನಂದ ಅಂತಿಮ 4ರ ಘಟ್ಟಕ್ಕೆ ಲಗ್ಗೆ ಇಟ್ಟರು.
ಭಾರತದ ಸುಮರಿವಾಲಾ ವಿಶ್ವ ಅಥ್ಲೆಟಿಕ್ಸ್ ಉಪಾಧ್ಯಕ್ಷ
ನವದೆಹಲಿ: ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ಅಧ್ಯಕ್ಷ ಅದಿಲೆ ಸುಮರಿವಾಲಾ ವಿಶ್ವ ಅಥ್ಲೆಟಿಕ್ಸ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ 65 ವರ್ಷದ ಸುಮರಿವಾಲಾ ಜೊತೆ ಇತರ ಮೂವರು ಕೂಡಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಸಮಿತಿಯಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಮೊದಲ ಭಾರತೀಯ ಎನಿಸಿದ್ದಾರೆ. 4 ವರ್ಷ ಕಾಲ ಸುಮರಿವಾಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
Chess World Cup 2023: ಆರ್.ಪ್ರಜ್ಞಾನಂದ & ಅರ್ಜುನ್ ಎರಿಗೈಸಿ ಇಬ್ಬರಲ್ಲಿ ಐತಿಹಾಸಿಕ ಸೆಮೀಸ್ ಭಾಗ್ಯ ಯಾರಿಗೆ?
ಕುಸ್ತಿ: ಅಮಿತ್ ಅ-20 ವಿಶ್ವ ಚಾಂಪಿಯನ್
ನವದೆಹಲಿ: ಜೊರ್ಡನ್‌ನಲ್ಲಿ ನಡೆಯುತ್ತಿರುವ ಅಂಡರ್-20 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಮಿತ್ ಕುಮಾರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಬುಧವಾರ 61 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ರಷ್ಯಾದ ಎಲ್ಡರ್ ವಿರುದ್ಧ ಜಯಗಳಿಸಿದರು. ಇದರೊಂದಿಗೆ 2019ರ ಬಳಿಕ ಕಿರಿಯರ ವಿಶ್ವ ಚಾಂಪಿಯನ್ ಆದ ಮೊದಲ ಭಾರತೀಯ ಎನಿಸಿಕೊಂಡರು. ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಪ್ರಿಯಾ ಫೈನಲ್ ಪ್ರವೇಶಿಸಿದರು.