ಕೋಲ್ಕತಾ(ಮಾ.14): ಆಸ್ಟ್ರೇಲಿಯಾ ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ 2019ರ ವಿಶ್ವಕಪ್ ಟೂರ್ನಿಗೆ ಆಟಗಾರರ ಆಯ್ಕೆ ಕಸರತ್ತು ನಡೆಸುತ್ತಿದೆ. ಇನ್ನು ಕೆಲ ದಿನಗಳಲ್ಲೇ ಐಪಿಎಲ್ ಟೂರ್ನಿ ಕೂಡ ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ವರದಕ್ಷಣಿ, ಲೈಂಗಿಕ ಕಿರುಕುಳ ಕುರಿತು ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ರೆಡಿ -ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!

ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ವರ್ಷ ಶಮಿ ವಿರುದ್ಧ ಸರಣಿ ಆರೋಪ ಮಾಡಿರುವ ಜಹಾನ್ ದೂರು ದಾಖಲಿಸಿದ್ದಾರೆ. ಬೇರೆ ಮದುವೆ ಮಾಡಿಕೊಂಡಿದ್ದಾರೆ ಎಂದು ವಂಚನೆ ಪ್ರಕರಣ ಕೂಡ ದಾಖಲಿಸಿದ್ದಾರೆ.  ಶಮಿ ವಿರುದ್ಧದ IPC 498A and 354A ಪ್ರಕರಣ ದಾಖಲಿಸಿಕೊಂಡಿದ್ದ ಕೋಲ್ಕತ್ತಾ  ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಧೋನಿ ನೆರವಿನಿಂದ ವಿಶ್ವಕಪ್ ಗೆಲ್ಲಲ್ಲಿದ್ದಾರೆ ಕೊಹ್ಲಿ!

2019ರ ವಿಶ್ವಕಪ್ ಟೂರ್ನಿಯ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಶಮಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡರೆ ಅನಿವಾರ್ಯವಾಗಿ ಶಮಿ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ.