ಮುಂಬೈ(ಮಾ.02): ನಾಯಕ ವಿರಾಟ್ ಕೊಹ್ಲಿ ಯಶಸ್ಸಿನಲ್ಲಿ ಮಾಜಿ ನಾಯಕ ಎಂ.ಎಸ್.ಧೋನಿ ಕೊಡುಗೆ ಅಪಾರವಾಗಿದೆ. ಇದೀಗ 2019ರ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿಗೆ, ಧೋನಿ ನೆರವು ಸಹಾಯವಾಗಲಿದೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಹೊಸ ಜರ್ಸಿ ಅನಾವರಣ!

ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒತ್ತಡದ ಸಂದರ್ಭಗಳು ಸೇರಿದಂತೆ ಟೀಂ ಇಂಡಿಯಾದ ವಿಶ್ವಕಪ್ ಜರ್ನಿಯಲ್ಲಿ ಧೋನಿ ಅನುಭವ ಕೊಹ್ಲಿಗೆ ನರೆವಾಗಲಿದೆ. ಇದು ವಿಶ್ವಕಪ್ ಗೆಲುವಿಗೆ ಸಹಾಯವಾಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ವಿಂಗ್ ಕಮಾಂಡರ್ ಅಭಿನಂದನ್‌ ಜರ್ಸಿ ಬಿಡುಗಡೆ ಮಾಡಿದ ಬಿಸಿಸಿಐ!

ಫೀಲ್ಡಿಂಗ್ ಬದಲಾವಣೆ, ಪರಿಸ್ಥಿತಿಗೆ ತಕ್ಕಂತೆ ಪ್ಲಾನ್ ಬದಲಾವಣೆ, ಬೌಲರ್ ಜೊತೆಗೆ ಮಾತುಕತೆ ಮಾಡೋ ಮೂಲಕ ಧೋನಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಲ್ಲರು. ಬೌಲರ್‌ಗಳಿಗೆ ಧೋನಿ ಟಿಪ್ಸ್ ಅತ್ಯಂತ ಮುಖ್ಯ ಎಂದು ಗವಾಸ್ಕರ್ ಹೇಳಿದ್ದಾರೆ.