ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚೆಹಾಲ್ ಟಿವಿಯಲ್ಲಿ ಕಾಣಿಸಿಕೊಳ್ಳಲು ಶ್ರೇಷ್ಠ ಪ್ರದರ್ಶನ ನೀಡಿದರೆ ಮಾತ್ರ ಸಾಧ್ಯ. ಶತಕ ಅಥವಾ 5 ವಿಕೆಟ್ ಕಬಳಿಸಿದವರಿಗೆ ಮಾತ್ರ ಚಹಾಲ್ ಅವಕಾಶ ನೀಡುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಸಂದರ್ಶನ ಇಲ್ಲಿದೆ. 

ಆಡಿಲೆಡ್(ಜ.16): ಆಸ್ಟ್ರೇಲಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಇದೀಗ ಟೀಮ್ ಮೇಟ್ ಯಜುವೇಂದ್ರ ಚೆಹಾಲ್ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಚಹಾಲ್ ಟಿವಿಯಲ್ಲಿ ಪಾಲ್ಗೊಳ್ಳಲು ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ-ಧೋನಿ ಬ್ಯಾಟಿಂಗ್ ಕಂಡು ಫಿದಾ ಆದ ಕ್ರಿಕೆಟಿಗರು..!

ಪಂದ್ಯದ ಬಳಿಕ ಚಹಾಲ್ ಜೊತೆಗಿನ ಮಾತುಕತೆಯಲ್ಲಿ ವಿರಾಟ್ ಕೊಹ್ಲಿ ತಮಾಷೆಯಾಗಿ ಮಾತನಾಡಿದ್ದಾರೆ. ಯಜುವೇಂದ್ರ ಚಹಾಲ್ ಟಿವಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿ ಚೆಹಾಲ್ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಾನು ಬಂದಿದ್ದೇನೆ. ಶತಕ ಅಥವಾ 5 ವಿಕೆಟ್ ಪಡೆದವರಿಗೆ ಮಾತ್ರ ಚಹಾಲ್ ಟಿವಿಯಲ್ಲಿ ಅವಕಾಶ ಎಂದು ಹಾಸ್ಯ ಮಾಡಿದ್ದಾರೆ.

Scroll to load tweet…

ಇದನ್ನೂ ಓದಿ: 15/01- ಆರ್ಮಿ ಡೇ, ವಿರಾಟ್ ಕೊಹ್ಲಿಗೆ ಲಕ್ಕಿ ಡೇ..!

ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 104 ರನ್ ಸಿಡಿಸಿದ್ದರು. 299 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.