Asianet Suvarna News Asianet Suvarna News

15/01- ಆರ್ಮಿ ಡೇ, ವಿರಾಟ್ ಕೊಹ್ಲಿಗೆ ಲಕ್ಕಿ ಡೇ..!

ದೇಶದಾದ್ಯಂತ ಇಂದು ಅತ್ಯಂತ ಸಡಗರ-ಸಂಭ್ರಮದಿಂದ ಮಕರ ಸಂಕ್ರಾಂತಿ ಹಾಗೂ 71ನೇ ಆರ್ಮಿ ದಿನಾಚರಣೆ[ಸೈನಿಕರ ದಿನಾಚರಣೆ] ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ಭಾರತ 2019ರಲ್ಲಿ ಚೊಚ್ಚಲ ಏಕದಿನ ಗೆಲುವು ದಾಖಲಿಸಲು ಕಾರಣರಾದರು.

Team India Cricket Captain Virat Kohli Once again Start Century in January 15
Author
Bengaluru, First Published Jan 15, 2019, 8:59 PM IST

ಬೆಂಗಳೂರು[ಜ.15]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡಿಲೇಡ್ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಕ್ರಿಕೆಟ್’ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ನಾಯಕ ಎನ್ನುವ ಕೀರ್ತಿಗೂ ಭಾಜನರಾಗಿದ್ದಾರೆ.
ದೇಶದಾದ್ಯಂತ ಇಂದು ಅತ್ಯಂತ ಸಡಗರ-ಸಂಭ್ರಮದಿಂದ ಮಕರ ಸಂಕ್ರಾಂತಿ ಹಾಗೂ 71ನೇ ಆರ್ಮಿ ದಿನಾಚರಣೆ[ಸೈನಿಕರ ದಿನಾಚರಣೆ] ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ಭಾರತ 2019ರಲ್ಲಿ ಚೊಚ್ಚಲ ಏಕದಿನ ಗೆಲುವು ದಾಖಲಿಸಿದೆ. ಇದರ ಜತೆಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯವನ್ನು ಗೆಲುವಿನತ್ತ ಮುನ್ನಡೆಸಿದ ಭಾರತದ ಮೊದಲ ನಾಯಕ ಎನ್ನುವ ಖ್ಯಾತಿಗೂ ಕೊಹ್ಲಿ ಭಾಜನರಾಗಿದ್ದಾರೆ.

"

ಆರ್ಮಿ ಡೇ-ಲಕ್ಕಿ ಡೇ: 15/01 ಈ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಸತತ ಮೂರು ವರ್ಷಗಳಿಂದ ಅದೃಷ್ಟದ ದಿನವಾಗಿ ಮಾರ್ಪಟ್ಟಿದೆ. ಯಾಕೆಂದರೆ 15/01ರಲ್ಲಿ ಸತತ ಮೂರು ವರ್ಷಗಳಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವರ್ಷದ ಮೊದಲ ಶತಕವನ್ನು 15/01ರಂದೇ ಸಿಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!

ಹೌದು, ವಿರಾಟ್ ಕೊಹ್ಲಿ 2017, 2018 ಹಾಗೂ 2019ರಂದು ಜನವರಿ 15ರಂದೇ ವರ್ಷದ ಮೊದಲ ಶತಕ ಸಿಡಿಸುವ ಮೂಲಕ ಶತಕದ ಖಾತೆ ಆರಂಭಿಸಿದ್ದಾರೆ. 2017ರ ಜನವರಿ 15ರಂದು ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 122 ರನ್ ಸಿಡಿಸಿದ್ದರು. ಈ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಇನ್ನು 2018ರ ಜನವರಿ 15ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ 153 ರನ್ ಚಚ್ಚಿದ್ದರು. ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ ಸೆಂಚುರಿಯನ್ ಟೆಸ್ಟ್ ಪಂದ್ಯವನ್ನು ಭಾರತ ಕೈಚೆಲ್ಲಿತ್ತು. ಇದೀಗ ಈ ವರ್ಷವೂ 15ರಂದೇ ಶತಕ ಸಿಡಿಸುವ ಮೂಲಕ ಕೊಹ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕಳೆದೆರಡು ವರ್ಷಗಳಲ್ಲೂ ಅತ್ಯದ್ಭುತ ಬ್ಯಾಟಿಂಗ್ ನಡೆಸಿರುವ ಕಿಂಗ್ ಕೊಹ್ಲಿ ಈ ಬಾರಿಯೂ ರನ್ ಬೇಟೆಯಾಡುವ ಮುನ್ಸೂಚನೆಯನ್ನು ಸಂಕ್ರಾಂತಿ ದಿನದಂದೇ ನೀಡಿರುವುದು ವಿರಾಟ್ ಅಭಿಮಾನಿಗಳ ಪಾಲಿಗೆ ಖುಷಿ ನೀಡಿರುವುದಂತೂ ಸುಳ್ಳಲ್ಲ. 

Follow Us:
Download App:
  • android
  • ios