ಶನಿವಾರ ಮಧ್ಯರಾತ್ರಿ ನಡೆದ 8ನೇ ಸುತ್ತಿನ ಪಂದ್ಯದಲ್ಲಿ ಸ್ಪರ್ಧಿ ಆರ್‌.ಪ್ರಜ್ಞಾನಂದ ಅವರು ಫ್ರಾನ್ಸ್‌ನ ಫಿರೌಜಾ ಅಲಿರೇಜಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಪ್ರಜ್ಞಾನಂದ 4.5 ಅಂಕಗಳೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದಾರೆ.

ಟೊರೊಂಟೊ: ಭಾರತದ ತಾರಾ ಚೆಸ್‌ ಪಟು ಡಿ.ಗುಕೇಶ್‌ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ತಮ್ಮ ದೇಶದವರೇ ಆದ ವಿದಿತ್ ಗುಜರಾತಿ ವಿರುದ್ಧ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಮತ್ತೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇಬ್ಬರೂ ತಲಾ 5 ಅಂಕಗಳನ್ನು ಹೊಂದಿದ್ದಾರೆ.

ಶನಿವಾರ ಮಧ್ಯರಾತ್ರಿ ನಡೆದ 8ನೇ ಸುತ್ತಿನ ಪಂದ್ಯದಲ್ಲಿ ಸ್ಪರ್ಧಿ ಆರ್‌.ಪ್ರಜ್ಞಾನಂದ ಅವರು ಫ್ರಾನ್ಸ್‌ನ ಫಿರೌಜಾ ಅಲಿರೇಜಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಪ್ರಜ್ಞಾನಂದ 4.5 ಅಂಕಗಳೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದಾರೆ.

IPL 2024: ಲಖನೌ ಗಾಯದ ಮೇಲೆ 'ಸಾಲ್ಟ್' ಸುರಿದ ಕೆಕೆಆರ್..!

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಭಾರತದವರೇ ಆದ ಆರ್‌.ವೈಶಾಲಿ ವಿರುದ್ಧ ಗೆಲುವು ಸಾಧಿಸಿದರು. ಕೊನೆರು 3.5 ಅಂಕಗಳನ್ನು ಹೊಂದಿದ್ದು, ಜಂಟಿ 3ನೇ ಸ್ಥಾನದಲ್ಲಿದ್ದಾರೆ. ವೈಶಾಲಿ ಕೇವಲ 2.5 ಅಂಕಗಳನ್ನು ಹೊಂದಿದ್ದಾರೆ. ಟೂರ್ನಿಯಲ್ಲಿ ಇನ್ನೂ 6 ಸುತ್ತಿನ ಪಂದ್ಯಗಳು ನಡೆಯಲಿವೆ.

ತಾರಾ ಶೂಟರ್‌ ಪಾಲಕ್‌ ಒಲಿಂಪಿಕ್ಸ್‌ಗೆ ಅರ್ಹತೆ

ರಿಯೊ ಡೆ ಜನೈರೊ(ಬ್ರೆಜಿಲ್): ಐಎಸ್‌ಎಸ್‌ಎಫ್‌ ಫೈನಲ್‌ ಒಲಿಂಪಿಕ್‌ ಅರ್ಹತಾ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ತಾರಾ ಶೂಟರ್‌ ಪಾಲಕ ಗುಲಿಯಾ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಬ್ಯಾನ್ ಆಗುವುದರಿಂದ ಕೊನೆ ಕ್ಷಣದಲ್ಲಿ ಬಚಾವಾದ ರಿಷಭ್ ಪಂತ್..! ಆದರೂ ಆತಂಕ ತಪ್ಪಿದ್ದಲ್ಲ

ಇದು ಭಾರತಕ್ಕೆ ದೊರೆತ 20ನೇ ಒಲಿಂಪಿಕ್ಸ್‌ ಕೋಟಾ. ಇದರಲ್ಲಿ ಪಿಸ್ತೂಲ್‌ ಮತ್ತು ಶೂಟಿಂಗ್‌ ವಿಭಾಗದಲ್ಲಿ ಭಾನುವಾರ ಪಾಲಕ್‌ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ 3ನೇ ಸ್ಥಾನಿಯಾದರು.

ಏಷ್ಯನ್ ಕುಸ್ತಿ: ಭಾರತಕ್ಕೆ 2 ಬೆಳ್ಳಿ, 2 ಕಂಚಿನ ಪದಕ

ಬಿಸ್ಕೆಕ್ (ಕಿರ್ಗಿಸ್ತಾನ): ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಭಾರತ ಮತ್ತೆ 4 ಪದಕ ತನ್ನದಾಗಿಸಿಕೊಂಡಿದೆ. ಭಾನುವಾರ ಮಹಿಳೆಯರ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅಂಜು, ಕೊರಿಯಾದ ಜಿ ಹ್ಯಾಂಗ್ ಕಿಮ್ ವಿರುದ್ಧ 0-10 ಅಂತರದಲ್ಲಿ ಸೋಲನುಭವಿಸಿದರು. ಆಯ್ಕೆ ಟ್ರಯಲ್ಸ್ ನಲ್ಲಿ ವಿನೇಶ್ ಫೋಗಟ್‌ರನ್ನು ಸೋಲಿಸಿದ್ದ ಅಂಜು ಚಿನ್ನ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರು. ಆದರೆ ಫೈನಲ್‌ನಲ್ಲಿ ನಿರೀಕ್ಷೆ ಪ್ರದರ್ಶನ ನೀಡಲಾಗಲಿಲ್ಲ. 

ಇದೇ ವೇಳೆ ಹರ್ಷಿತಾ ಅವರು ಚೀನಾದ ಕ್ರಿಯಾನ್ ಜಿಯಾಂಗ್ ವಿರುದ್ಧ 2-5ರಲ್ಲಿ ಪರಾಭವಗೊಂಡರು. ಮನೀಶಾ(62 ಕೆ.ಜಿ.), ಅಂತಿಮ್ ಕುಂಡು (65 ಕೆ.ಜಿ.) ಕಂಚು ಪಡೆದರು. ಭಾರತದ ಮಹಿಳೆಯರು ಕೂಟದಲ್ಲಿ ಒಟ್ಟು 3 ಬೆಳ್ಳಿ, 3 ಕಂಚಿನೊಂದಿಗೆ ಅಭಿಯಾನ ಕೊನೆಗೊಳಿಸಿದರು.