ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗೆಲ್ಲಲು 162 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಎರಡನೇ ಓವರ್‌ನಲ್ಲೇ ಸುನಿಲ್ ನರೈನ್ ವಿಕೆಟ್ ಕಳೆದುಕೊಂಡಿತು. ನರೈನ್ 6 ಹಾಗೂ ಅಂಗ್‌ಕೃಷ್ ರಘುವಂಶಿ 7 ರನ್ ಗಳಿಸಿ ಮೊಯ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.
ಕೋಲ್ಕತಾ(ಏ.14): ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾಗಿದ್ದ ಲಖನೌ ಸೂಪರ್ ಜೈಂಟ್ಸ್ ಇದೀಗ ಕೋಲ್ಕತಾ ನೈಟ್ ರೈಡರ್ಸ್ ಎದುರು ಹೀನಾಯ ಸೋಲು ಅನುಭವಿಸಿದೆ. ಮೊದಲೇ ಸೋಲಿನ ಆಘಾತದಲ್ಲಿದ್ದ ಲಖನೌ ಪಡೆಗೆ ಫಿಲ್ ಸಾಲ್ಟ್ ಸ್ಪೋಟಕ ಅರ್ಧಶತಕ ಸಿಡಿಸಿ ಗಾಯದ ಮೇಲೆ ಉಪ್ಪು ಸುರಿಸಿದ್ದಾರೆ. ಗೆಲ್ಲಲು 162 ರನ್ ಗುರಿ ಬೆನ್ನತ್ತಿದ ಕೆಕೆಆರ್ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು ಕೊಂಡು 26 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಫಿಲ್ ಸಾಲ್ಟ್ ಅಜೇಯ 89 ರನ್ ಸಿಡಿಸಿ ಗೆಲುವಿನ ರೂವಾರಿ ಎನಿಸಿದರು.
ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗೆಲ್ಲಲು 162 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಎರಡನೇ ಓವರ್‌ನಲ್ಲೇ ಸುನಿಲ್ ನರೈನ್ ವಿಕೆಟ್ ಕಳೆದುಕೊಂಡಿತು. ನರೈನ್ 6 ಹಾಗೂ ಅಂಗ್‌ಕೃಷ್ ರಘುವಂಶಿ 7 ರನ್ ಗಳಿಸಿ ಮೊಯ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.
IPL 2024 ಕೆಕೆಆರ್ ಶಿಸ್ತುಬದ್ದ ದಾಳಿ: ಸಾಧಾರಣ ಗುರಿ ನೀಡಿದ ಲಖನೌ ಸೂಪರ್ ಜೈಂಟ್ಸ್
ಗಾಯದ ಮೇಲೆ ಬರೆ ಎಳೆದ ಸಾಲ್ಟ್-ಅಯ್ಯರ್: 42 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಕೆಕೆಆರ್ ತಂಡಕ್ಕೆ ಮೂರನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಫಿಲ್ ಸಾಲ್ಟ್ ಮುರಿಯದ 120 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಿಲ್ ಸಾಲ್ಟ್ 47 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 89 ರನ್ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ನಾಯಕ ಶ್ರೇಯಸ್ ಅಯ್ಯರ 38 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ ಅಜೇಯ 38 ರನ್ ಬಾರಿಸಿದರು.
ಲಖನೌ ಎದುರು ಮೊದಲ ಜಯ: ಐಪಿಎಲ್ ಇತಿಹಾಸದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರು ಪಂದ್ಯದಲ್ಲೂ ಲಖನೌ ಗೆಲುವಿನ ನಗೆಬೀರಿತ್ತು. ಇದೀಗ ಮೊದಲ ಬಾರಿಗೆ ಲಖನೌ ಎದುರು ಕೆಕೆಆರ್ ಭರ್ಜರಿಯಾಗಿಯೇ ಮೊದಲ ಗೆಲುವು ದಾಖಲಿಸಿದೆ.
