ನವದೆಹಲಿ(ಏ.29): ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್ ಇರೋ ವ್ಯಕ್ತಿ. ಅದರಲ್ಲೂ ಆನಂದ್ ಮಹೀಂದ್ರಾ ಟ್ವೀಟ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.

ಅದರಂತೆ ಆನಂದ್ ಮಹೀಂದ್ರಾ ಅವರ ಹೊಸ ಟ್ವಿಟ್ ಇದೀಗ ಭಾರೀ ವೈರಲ್ ಆಗಿದ್ದು, ಚಾಲಾಕಿ ಹೆಂಡತಿ ಹೊಂದಿರುವ ಅಪಾಯಗಳ ಕುರಿತು ಆನಂದ್ ಎಚ್ಚರಿಕೆ ನೀಡಿದ್ದಾರೆ.

ಅಸಲಿಗೆ ಪತಿಯೋರ್ವ ತನ್ನ ಪತ್ನಿಯ ಮಾತು ಕೇಳದಿರಲು ಕಳೆದ 62 ವರ್ಷಗಳಿಂದ ಕಿವುಡನ ಹಾಗೆ ನಾಟಕವಾಡಿದ ಸುದ್ದಿಯೊಂದು ವಿದೇಶಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು.

ಇದರ ಫೋಟೋ ಶೇರ್ ಮಾಡಿರುವ ಆನಂದ್, 'ಇದನ್ನು ಓದಿ ನನಗೆ ನಗು ತಡೆಯಲಾಗುತ್ತಿಲ್ಲ. ಅಲ್ಲದೇ ಇದೇ ರೀತಿ ನಾನೂ ಮಾಡಿದ್ದರೆ ಏನು ಮಾಡುತ್ತಿದ್ದೆ ಎಂದು ಪತ್ನಿಯನ್ನು ಕೇಳಿದಾಗ, 5 ನಿಮಿಷ ನೀವು ಮೊಬೈಲ್ ಫೋನ್ ಬಿಟ್ಟರೆ ಅಲ್ವಾ ಎಂದು ಉತ್ತರಿಸಿದಳು. ಚಾಲಾಕಿ ಹೆಂಡ್ತಿ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.