ಬ್ರಿಟೀಷ್ ಮೂಲದ ಟ್ರಿಯಂಪ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಟ್ರಿಯಂಪ್ ಬೈಕ್ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ(ಏ.13): ಬ್ರಿಟೀಷ್ ಮೂಲದ ಟ್ರಿಯಂಪ್ ಬೈಕ್ ಭಾರತದಲ್ಲಿ ಬುಡುಗಡೆಯಾಗುತ್ತಿದೆ. ಏಪ್ರಿಲ್ 24 ರಂದು ಟ್ರಿಯಂಪ್ ಸ್ಪೀಡ್ ಟ್ವಿನ್ ಬೈಕ್ ಬಿಡಗಡೆಯಾಗಲಿದೆ. ಈ ಮೂಲಕ ಬ್ರಿಟೀಷ್ ಬೈಕ್ ಟ್ರಿಯಂಪ್ ಭಾರತದಲ್ಲಿ ಶಾಖೆ ಆರಂಭಿಸುತ್ತಿದೆ. 1938ರಲ್ಲಿ ಆರಂಭವಾದ ಟ್ರಿಯಂಪ್ ಬೈಕ್ ಇದೀಗ ವಿಶ್ವದ ಎಲ್ಲಾ ಪ್ರಮಖ ರಾಷ್ಟ್ರಗಳಲ್ಲಿ ಶಾಖೆ ಹೊಂದಿದೆ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.
ಇದನ್ನೂ ಓದಿ: 20 ಲಕ್ಷ ಸ್ಫಟಿಕದಿಂದ ಕಾರು ಮಾಡಿಫೈ ಮಾಡಿದ ಸೆಲೆಬ್ರೆಟಿ -ಬೇಕಾ ಬಿಟ್ಟಿ ಖರ್ಚಿಗೆ ತರಾಟೆ!
ನೂತನ ಸ್ಪೀಡ್ ಟ್ವಿನ್ ಬೈಕ್ 1200 cc 'ಹೈ ಪವರ್' ಪ್ಯಾರಲೆಲ್-ಟ್ವಿನ್ ಎಂಜಿನ್ ಹೊಂದಿದೆ. ಹೀಗಾಗಿ 96 bhp ಪವರ್(@ 6,750 rpm) ಹಾಗೂ 112 Nm (@4,950 rpm)ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ 6 ಗೇರ್ ಬಾಕ್ಸ್ ಹೊಂದಿದೆ. ಮಾರುತಿ ಸ್ವಿಫ್ಟ್ ಕಾರಿನ ಸಿಸಿಗಿಂತ ಟ್ರಿಯಂಪ್ ಸ್ಪೀಡ್ ಟ್ವಿನ್ ಬೈಕ್ ಎಂಜಿನ್ ಸಿಸಿ ಹೆಚ್ಚಿದೆ.
ಇದನ್ನೂ ಓದಿ: Youtubeನಲ್ಲಿ Live: ಫೋರ್ಡ್ ಮಸ್ತಾಂಗ್ ಚಾಲಕ ಪೊಲೀಸರ ಅತಿಥಿ!
ಟ್ರಿಯಂಪ್ ಸ್ಪೀಡ್ ಟ್ವಿನ್ ಬೈಕ್ ಬೆಲೆ ಸರಿಸುಮಾರು 11 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದೆ. ಮೊದಲು ಬುಕ್ ಮಾಡೋ ಗ್ರಾಹಕರಿಗೆ ಎಪ್ರಿಲ್ ಅಂತ್ಯ ಹಾಗೂ ಮೇ ಆರಂಭದಲ್ಲಿ ಬೈಕ್ ಡೆಲಿವರಿ ಆಗಲಿದೆ ಎಂದು ಕಂಪನಿ ಹೇಳಿದೆ.
