ಕಾರಿನ ಬಣ್ಣ ಬದಲಾಯಿಸಲು ಹಾಗೂ ಝಗಮಗಿಸುವ ಮಾಡಿಫೈಗಾಗಿ ಬರೋಬ್ಬರಿ 20 ಲಕ್ಷ ಸ್ಫಟಿಕ ಬಳಸಲಾಗಿದೆ. ಇದರ ಬೆಲೆ ಸುಮಾರು 10 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸೆಲೆಬ್ರೆಟಿ ಕಾರು ಮಾಡಿಫಿಕೇಶನ್‌ಗೆ ವಿರೋಧ ವ್ಯಕ್ತವಾಗಿದೆ.

ಲಂಡನ್(ಏ.13): ಐಷಾರಾಮಿ ಹಾಗೂ ದುಬಾರಿ ಲ್ಯಾಂಬೋರ್ಗಿನಿ ಅವೆಂಟಡೂರ್ ಕಾರನ್ನು ಮಾಡಿಫಿಕೇಶನ್ ಮಾಡಿ ಎಲ್ಲರ ಕಣ್ಣ ಕುಕ್ಕುವಂತೆ ಮಾಡಲಾಗಿದೆ. ಬರೋಬ್ಬರಿ 20 ಲಕ್ಷ ಸ್ಫಟಿಕದಿಂದ ಕಾರನ್ನು ಮಾಡಿಫೈ ಮಾಡಲಾಗಿದೆ. ಝಗಮಗಿಸುತ್ತಿರುವ ಈ ಕಾರು ಇದೀಗ ಯಾವುದೇ ರಸ್ತೆಯಲ್ಲಿ ಓಡಾಡಿದರೂ ಎಲ್ಲರ ಗಮನಸೆಳೆಯುತ್ತಿದೆ. 

ಇದನ್ನೂ ಓದಿ: 2018-19ರಲ್ಲಿ ಗರಿಷ್ಠ ಮಾರಾಟ - ಮಾರುತಿ ಸುಜುಕಿಯದ್ದೇ 'ಕಾರು'ಬಾರು!

ಲ್ಯಾಂಬೋರ್ಗಿನಿ ಅವೆಂಟಡೂರ್ ಕಾರಿನ ಗರಿಷ್ಠ ಬೆಲೆ 6.25 ಕೋಟಿ ರೂಪಾಯಿ. ಈ ಕಾರನ್ನು ಖರೀದಿಸಿದ ರಷ್ಯಾದ ಮೂಲದ ಇನ್‌ಸ್ಟಾಗ್ರಾಂ ಸೆಲೆಬ್ರೆಟಿ ದಾರಿಯಾ ರಾಡಿಯೋನೊವಾ, ಬಳಿಕ ಕಾರಿನ ಬಣ್ಣ ಬದಲಾಯಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 20 ಲಕ್ಷ ಸ್ಫಟಿಕವನ್ನು ಬಳಸಲಾಗಿದೆ. ಹೀಗಾಗಿ ಬಣ್ಣ ಬದಲಾಯಿಸಲು 10 ಕೋಟಿ ರೂಪಾಯಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾಳೆ. 

View post on Instagram

ಸೆಲೆಬ್ರೆಟಿ ಬಹುನಿರೀಕ್ಷಿತ ಕಾರಿಗೆ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಾರಿನ ಬಣ್ಣ ಸರಿಯಾಗಿಲ್ಲ, ಹೊಂದುತ್ತಿಲ್ಲ, ಸಾಧರಣ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಬದಲು ಮಕ್ಕಳ ಆರೋಗ್ಯ, ಶಿಕ್ಷಣ, ಬಡವರಿಗೆ ನೆರವು ನೀಡಲು ಈ ಹಣ ಉಪಯೋಗಿಸಬಹುತ್ತಿತ್ತು ಎಂದಿದ್ದಾರೆ. ಒಂದು ಗ್ರಾಮನ್ನು ದತ್ತು ತೆಗೆದು ನೆರವಾಗಬಹುದಿತ್ತು ಎಂದಿದ್ದಾರೆ. 


View post on Instagram