ಯೂಟ್ಯೂಬ್ ಮೂಲಕ ಲೈವ್ ಮಾಡಿದ ಫೋರ್ಡ್ ಮಸ್ತಾಂಗ್ ಚಾಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಲೈವ್ ಮಾಡಿ ಬಂಧನಕ್ಕೊಳಗಾಗಿದ್ದು ಯಾಕೆ? ಇಲ್ಲಿದೆ ವಿವರ.

ಮಿಸ್ಸಿಸ್ಸಿಪ್ಪಿ(ಏ.06): ಫೋರ್ಡ್ ಮಸ್ತಂಗ್ ಕಾರು, ಹೈವೇ ರೋಡ್, ಇನ್ನೇನು ಬೇಕು ಹೇಳಿ. ವೇಗಕ್ಕೆ ಮಿತಿಯೇ ಇರುವುದಿಲ್ಲ. ಇಷ್ಟೇ ಆಗಿದ್ದರೆ ಪರ್ವಾಗಿರ್ಲಿಲ್ಲ. ಆದರೆ ಅತೀ ವೇಗದ ಜೊತೆದೆ ಯೂಟ್ಯೂಬ್ ಲೈವ್. ಎಡವಟ್ಟಾಗಿದ್ದು ಇಲ್ಲೆ. ಸಾಮಾಜಿಕ ಜಾಲತಾಣದಲ್ಲಿ ಅತೀ ವೇಗದ ಡ್ರೈವಿಂಗ್ Live ಮುಗಿಯುವಷ್ಟರಲ್ಲಿ ಪೊಲೀಸರು ಮಾಲೀಕನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಮಾರುತಿ ಒಮ್ನಿ ವ್ಯಾನ್‌ ಉತ್ಪಾದನೆ ಸ್ಥಗಿತ..!

ಈ ಘಟನೆ ನಡೆದಿರೋದು ದಕ್ಷಿಣ ಅಮೇರಿಕಾದ ಮಿಸ್ಸಿಸ್ಸಿಪ್ಪಿ ನಗರದಲ್ಲಿ. ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಲೈವ್ ಮೂಲಕ ಸೆಲೆಬ್ರೆಟಿಯಾಗಿದ್ದ ಮಿಸ್ಸಿಸ್ಸಿಪ್ಪಿ ನಿವಾಸಿ, ಹಲವು ಭಾರಿ ಈ ರೀತಿ ಅತೀರೇಕದ ಲೈವ್ ಮಾಡೋ ಮೂಲಕ ಪೊಲೀಸರ ನಿದ್ದೆಗೆಡಿಸಿದ್ದರು. ಫೋರ್ಡ್ ಶೆಲ್ಬೈ GT350 ಕಾರಿನಲ್ಲಿ ಈತ 290 kmph ವೇಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಲಾಯಿಸಿದ್ದಾನೆ. 

ಇದನ್ನೂ ಓದಿ: ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!

ಅತೀ ವೇಗದ ಪ್ರಯಾಣವನ್ನು ಯೂಟ್ಯೂಬ್ ಮೂಲಕ ಲೈವ್ ಮಾಡಿದ್ದಾನೆ. ಲೈವ್ ವೀಕ್ಷಿಸಿದ್ದ ಕೆಲವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಲೈವ್ ಮುಗಿಯುವಷ್ಟರಲ್ಲೇ ಮಿಸ್ಸಿಸ್ಸಿಪ್ಪಿ ನಿವಾಸಿಯನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ತನಿಖೆ ನಡೆಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಮಾರಕಾಸ್ತ್ರಗಳನ್ನು ಹಿಡಿದು ಫೇಸ್‌ಬುಕ್ ಲೈವ್ ಮಾಡಿದ್ದ ವೀಡಿಯೋ ಪೊಲೀಸರಿಗೆ ಸಿಕ್ಕಿದೆ. ಈತನ ವಿರುದ್ಧ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗದ ವಾಹನ ಚಲಾವಣೆ, ಸಿಗ್ನಲ್ ಜಂಪ್, ಟ್ರಾಪಿಕ್ ನಿಯಮ ಉಲ್ಲಂಘನೆ, ಸಾರ್ವಜನಿಕರನ್ನು ಭಯಭೀತಗೊಳಿಸಿದ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.