ಪ್ರತಿಭೆ ಹಾಗೂ ಮಾಡುವ ಕೆಲಸದಲ್ಲಿ ಆಸಕ್ತಿಯೊಂದಿದ್ದರೆ ಏನು ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಅಸ್ಸಾಂನ ಈ ಹುಡುಗ ಸಾಕ್ಷಿಯಾಗಿದ್ದಾನೆ. ಈತನ ಕನಸು ಹಾಗೂ ಶ್ರಮವೇ ಈಗ ಈತನನ್ನು ಬ್ರಹ್ಮಪುತ್ರದ ನದಿ ದಂಡೆಯಿಂದ ಥೈಲ್ಯಾಂಡ್‌ನ ಬ್ಯಾಕಾಂಕ್‌ಗೆ ಪಯಣಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಪ್ರತಿಭೆ ಹಾಗೂ ಮಾಡುವ ಕೆಲಸದಲ್ಲಿ ಆಸಕ್ತಿಯೊಂದಿದ್ದರೆ ಏನು ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಅಸ್ಸಾಂನ ಈ ಹುಡುಗ ಸಾಕ್ಷಿಯಾಗಿದ್ದಾನೆ. ಈತನ ಕನಸು ಹಾಗೂ ಶ್ರಮವೇ ಈಗ ಈತನನ್ನು ಬ್ರಹ್ಮಪುತ್ರದ ನದಿ ದಂಡೆಯಿಂದ ಥೈಲ್ಯಾಂಡ್‌ನ ಬ್ಯಾಕಾಂಕ್‌ಗೆ ಪಯಣಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಅಂದಹಾಗೆ ಈತನ ಹೆಸರು ಸತ್ಯಜಿತ್ ಬೋರಾ ವಯಸ್ಸು ಕೇವಲ 27, ಗ್ರಾಮೀಣ ಕ್ರೀಡೆಗಳ ಮೈದಾನದಲ್ಲೇ ಈತನ ತನ್ನ ಕನಸಿಗೆ ಬುನಾದಿ ಹಾಕಿದ ಹಾಗಂತ ಈತ ಕ್ರೀಡಾಪಟು ಅಲ್ಲ, ಹಾಗಿದ್ದರೆ ಈತ ಯಾರು ಕ್ಯಾಮರಾ ಮ್ಯಾನ್. ಹೌದು ಕ್ಯಾಮರಾ ಮ್ಯಾನ್ ಸೆರೆ ಹಿಡಿದ ಸುಂದರ ದೃಶ್ಯಗಳು ಸದಾ ವೈರಲ್ ಆಗ್ತಿರ್ತವೆ ಆದರೆ ಕ್ಯಾಮರಾ ಮ್ಯಾನ್ ಎಲೆಮರೆಯ ಕಾಯಿಯಂತೆ ಯಾರಿಗೂ ಕಾಣುವುದೇ ಇಲ್ಲ.

ಬಿದಿರಿನ ಟ್ರೈಪಾಡ್ ಬಳಸಿ ವಾಲಿಬಾಲ್ ಪಂದ್ಯ ಪ್ರಸಾರ:

ಹೌದು ಅಸ್ಸಾಂನ ಲಕ್ಕಿಂಪುರ ಜಿಲ್ಲೆಯ ಪುಟ್ಟ ಗ್ರಾಮವಾದ ಸರ್ಜನ್‌ನ ನಿವಾಸಿ ಸತ್ಯಜಿತ್ ಬೋರಾ ಅವರು ಸರಿಯಾದ ಸೌಲಭ್ಯಗಳಿಲ್ಲದಿದ್ದರೂ ತಾವೇ ನಿರ್ಮಿಸಿದ ಬಿದಿರಿನ ಟ್ರೈಪಾಡ್ ಬಳಸಿ ಸ್ಥಳೀಯ ಹಳ್ಳಿಯ ವಾಲಿಬಾಲ್ ಕ್ರೀಡೆಗಳನ್ನೇ ಪ್ರಸಾರ ಮಾಡುವುದಕ್ಕೆ ಶುರು ಮಾಡಿದರು. ಅಲ್ಲಿನ ಸ್ಥಳೀಯ ಬ್ರಹ್ಮಪುತ್ರ ವಾಲಿಬಾಲ್ ಲೀಗ್‌ನ ಮೊದಲ ತಳಮಟ್ಟದ ಪ್ರಸಾರಕರಾಗಿ ಕೆಲಸ ಆರಂಭಿಸಿದ ಅವರ ಸಾಮರ್ಥ್ಯವೀಗ ಥೈಲ್ಯಾಂಡ್‌ನ ಫೆಡರೇಷನ್ ಇಂಟರ್ನ್ಯಾಷನಲ್ ಡಿ ವಾಲಿಬಾಲ್ ಗಮನಕ್ಕೂ ಬಂದಿದ್ದು, ಅಲ್ಲಿ ನಡೆಯುತ್ತಿದ್ದ ಎಫ್‌ಐವಿಬಿಯ ಮಹಿಳಾ ವಿಶ್ವ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದರ್ಜೆಯ ಪ್ರಸಾರದ ವೀಕ್ಷಣೆಗೆ ಆಹ್ವಾನ ಬಂದಿದೆ. ಸತ್ಯಜಿತ್ ಅವರಿಗೆ ಇದೊಂದು ವೃತ್ತಿಪರ ಅವಕಾಶಕ್ಕಿಂತಲೂ ಹೆಚ್ಚಿನದಾದ ಒಂದು ಅವಕಾಶವಾಗಿದೆ. ಶ್ರಮದ ಜೊತೆ ಪ್ರತಿಭೆ ಇದ್ದರೆ ಬ್ರಹ್ಮಪುತ್ರ ನದಿ ದಂಡೆಯಲ್ಲಿ ಬೆಳೆದ ಯುವಕನೋರ್ವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಹುದು ಎಂಬುದಕ್ಕೆ ಇದೊಂದು ಸಾಕ್ಷಿ.

ಎಲ್ಲವೂ ಶುರುವಾಗಿದ್ದು ಹೇಗೆ?

ಅಂದಹಾಗೆ ಸತ್ಯಜಿತ್ ಅವರ ಈ ಬ್ರಾಡ್‌ಕಾಸ್ಟಿಂಗ್ ಪ್ರಯಾಣ ಆರಂಭವಾಗಿದ್ದು, 2021ರಲ್ಲಿ ಇದೊಂದು ತರ ಅಚಾನಕ್ ಆಗಿ ನಡೆದ ಘಟನೆ ಅದನ್ನವರು ಹೇಳಿಕೊಂಡಿದ್ದು ಹೀಗೆ... ಒಂದು ದಿನ ಬಾಪೂಜಿ ವಾಲಿಬಾಲ್ ತರಬೇತಿ ಕೇಂದ್ರದಲ್ಲಿ ತರಬೇತುದಾರನೂ ಆಗಿರುವ ನನ್ನ ಸಹೋದರ ಅಮೃತ್ ಬರ್ಹೋಯ್ ಅವರು ಸಭೆಗೆ ಹಾಜರಾಗಲು ನನಗೆ ಕರೆ ಮಾಡಿದರು. ಅಲ್ಲಿ ನಾನು ಭಾರತದ ಮಾಜಿ ವಾಲಿಬಾಲ್ ನಾಯಕ ಅಭಿಜಿತ್ ಭಟ್ಟಾಚಾರ್ಯ ಸರ್ ಅವರನ್ನು ಮೊದಲ ಬಾರಿ ನೋಡಿದೆ. ಆ ಸಭೆಯಲ್ಲಿಯೇ ಸತ್ಯಜಿತ್ ಅವರನ್ನು ಬ್ರಹ್ಮಪುತ್ರ ವಾಲಿಬಾಲ್ ಟೀಮ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಆತ್ರೇಯರಿಗೆ ಪರಿಚಯವಾಯ್ತು. ಅವರು ಪ್ರತಿ ಹಳ್ಳಿಯ ಪಂದ್ಯಕ್ಕೂ ಪ್ರೇಕ್ಷಕರನ್ನು ನೀಡುವ ಕನಸು ಕಂಡಿದ್ದರು.

ನಂತರ ಯಾವುದೇ ನೀಲನಕ್ಷೆ ಇಲ್ಲದ ಕಾರಣ ಮೊದಲಿಗೆ ಪ್ರಯೋಗಕ್ಕೆ ಇಳಿದಿತ್ತು. ಕ್ಯಾಮೆರಾದ ಎತ್ತರ ಮತ್ತು ಸ್ಥಾನವನ್ನು ಲೆಕ್ಕಾಚಾರ ಮಾಡಲು ಡ್ರೈ ರನ್ ಅನ್ನು ಸೂಚಿಸಲಾಯಿತು. ಸತ್ಯಜಿತ್ ಗ್ರೌಂಡ್‌ಗೆ ಹಿಂತಿರುಗಿ, ಹಳೆಯ ರೆಫರಿ ಸ್ಟ್ಯಾಂಡ್ ಅನ್ನು ತಂದು, ಅದನ್ನು ಪಕ್ಕಕ್ಕೆ ಎಳೆದುಕೊಂಡು ರೆಕಾರ್ಡ್ ಮಾಡಲು ಬಳಸಿದರು. ಅವರು ಹೀಗೆ ಯಾವುದೇ ಸರಿಯಾದ ಸವಲತ್ತುಗಳಿಲ್ಲದೇ ಮಾಡಿದ ವೀಡಿಯೊವನ್ನು ಕಳುಹಿಸಿದಾಗ, ಅಮಿತಾಭ್ ಸಂತೋಷಪಟ್ಟರು. ಅವರು ನನಗೆ ಕರೆ ಮಾಡಿ ಅಳತೆಗಳನ್ನು ಕೇಳಿದರು. ಆದರೆ ದೊಡ್ಡ ಸವಾಲು ಟ್ರೈಪಾಡ್ ಆಗಿತ್ತು ಎಂದು ಆರಂಭದ ದಿನಗಳನ್ನು ನೆನೆದಿದ್ದಾರೆ ಸತ್ಯಜಿತ್.

ಇದಕ್ಕೆ ಬ್ರಹ್ಮಪುತ್ರ ತಂಡದ ಆಟಗಾರ 21 ವರ್ಷದ ಕೃಷ್ಣದತ್ತ ಅವರು ಪರಿಹಾರದೊಂದಿಗೆ ಬಂದರು. ಅವರು ಬಿದಿರಿನ ಟ್ರೈಪಾಡ್ ನಿರ್ಮಿಸಿದರು. ಹೊತ್ತುಕೊಂಡು ಹೋಗಲು ಹಗುರ ಆದರೆ ಗಟ್ಟಿಯಾದ ಜೊತೆಗೆ ಪರಿಸರಸ್ನೇಹಿ ಆಗಿರುವುದಲ್ಲದೇ ಕಡಿಮೆ ವೆಚ್ಚದ್ದಾಗಿತ್ತು. ಇದರ ಸತ್ಯಜಿತ್ ಮೊದಲ ಬಾರಿ ಬ್ರಹ್ಮಪುತ್ರ ವಾಲಿಬಾಲ್ ಲೀಗ್‌ನ ಮೊದಲ ಪ್ರಸಾರ ಮಾಡಿದರು.

ಆದರೆ ಸತ್ಯಜಿತ್ ಅವರಿಗೆ ಇದು ಸುಲಭವಾಗಿರಲಿಲ್ಲ. ಸರಿಯಾದ ಇಂಟರ್‌ನೆಟ್ ಕನೆಕ್ಷನ್ ಇಲ್ಲದಿರುವುದು ಅನಿರೀಕ್ಷಿತವಾದ ತಾಂತ್ರಿಕ ವೈಫಲ್ಯಗಳು ಲೈವ್‌ ಸ್ಟ್ರೀಮಿಂಗ್ ವೇಳೆ ಕಾಣಿಸುತ್ತಿದ್ದವು. ರೆಸಲ್ಯೂಷನ್ ಕಡಿಮೆ ಮಾಡುವ ಮೂಲಕ ಪರಿಹಾರ ಕಂಡುಕೊಂಡರು. ಅಸ್ಸಾಂನಲ್ಲಿ ವಾಲಿಬಾಲ್ ಕೇವಲ ಆಟವಲ್ಲ, ಅದೊಂದು ಹಬ್ಬ, ಇಲ್ಲಿ ಕೇವಲ 10ರ ಹರೆಯದ ಮಕ್ಕಳೇ ಭತ್ತದ ಗದ್ದೆಗಳಲ್ಲಿ ವಾಲಿಬಾಲ್ ಆಟಕ್ಕೆ ನೆಟ್ ಕಟ್ಟುತ್ತಾರೆ. ಇವರನ್ನು ಪೋಷಕರು ಪ್ರೋತ್ಸಾಹಿಸುತ್ತಾರೆ ಎಂದು ಹೇಳುತ್ತಾರೆ ಸತ್ಯಜಿತ್. ಈಗ ಸತ್ಯಜಿತ್ ಅವರಿಗೆ ಬ್ಯಾಂಕಾಕ್ ಪಯಣ ಹೊಸ ಅವಕಾಶವನ್ನು ನೀಡುವ ದೊಡ್ಡ ಸಾಧ್ಯತೆಯಾಗಿದೆ.

ಇದನ್ನೂ ಓದಿ: ಮಹಾ ಸಿಎಂ ಪತ್ನಿಯ ಒಳ್ಳೆಯ ಕೆಲಸಕ್ಕಿಂತ ಆಕೆಯ ಧಿರಿಸಿನ ಮೇಲೆಯೇ ಜನರ ಕಣ್ಣು

ಇದನ್ನೂ ಓದಿ: ನೀರಿಗೆ ಬಿಟ್ಟ ಗಣೇಶನ ಸ್ವಾಗತಿಸಿದ ಬಾತುಕೋಳಿಗಳು : ಮಿಂಚಿನ ವೇಗದಲ್ಲಿ ಮೀನಿನ ಬೇಟೆಯಾಡಿದ ಬೆಕ್ಕು: ವೀಡಿಯೋ