ಭಾರತ ಕಬಡ್ಡಿ ಸಂಸ್ಥೆಯೇ ಸಸ್ಪೆಂಡ್, ಜಾಗತಿಕ ಕೂಟಗಳಲ್ಲಿ ಸ್ಪರ್ಧೆಗೆ ತಡೆ!
ಭಾರತೀಯ ಅಮೆಚೂರ್ ಕಬಡ್ಡಿ ಸಂಸ್ಥೆ ಮೇಲೆ ಅಂತಾರಾಷ್ಟ್ರೀಯ ಕಬಡ್ಡಿ ಸಂಸ್ಥೆ ನಿಷೇಧ ಹೇರಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ: ಆಡಳಿತದ ಗೊಂದಲ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಅಮೆಚೂರ್ ಕಬಡ್ಡಿ ಸಂಸ್ಥೆ(ಎಕೆಎಫ್‌ಐ)ಯನ್ನು ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ ಅಮಾನತುಗೊಳಿಸಿದೆ. ಈ ಮೂಲಕ ಜಾಗತಿಕ ಕೂಟಗಳಲ್ಲಿ ಭಾರತೀಯ ತಂಡಗಳ ಸ್ಪರ್ಧೆಗೆ ನಿಷೇಧ ಹೇರಿದೆ. ಹೀಗಾಗಿ ಚೊಚ್ಚಲ ಆವೃತ್ತಿಯ ಬೀಚ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡಗಳು ಪಾಲ್ಗೊಳ್ಳುವುದಿಲ್ಲ.
ಎಕೆಎಫ್‌ಐಗೆ ಕಳೆದ 5 ವರ್ಷಗಳಿಂದ ಚುನಾಯಿತ ಸಮಿತಿಯಿಲ್ಲ. ನಿಯಮ ಉಲ್ಲಂಘಣೆ ಕಾರಣಕ್ಕೆ ಎಕೆಎಫ್‌ಐನ ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್, ನ್ಯಾ. ಎಸ್.ಪಿ. ಗರ್ಗ್ ಅವರನ್ನು 2019ರಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸಿತ್ತು. 2023ರ ಡಿಸೆಂಬರ್‌ನಲ್ಲಿ ಎಕೆಎಫ್‌ಐಗೆ ಚುನಾವಣೆ ನಡೆದಿತ್ತಾದರೂ ನಿಯಮ ಪಾಲಿಸಿಲ್ಲ ಎಂದು ದೆಹಲಿ ಹೈಕೋರ್ಟ್ ಚುನಾವಣೆಯನ್ನು ಅಸಿಂಧುಗೊಳಿಸಿತ್ತು.
ಕಿರಿಯ ಸ್ಯಾಫ್ ಫುಟ್ಬಾಲ್: ಭಾರತಕ್ಕೆ ಬಾಂಗ್ಲಾ ಶರಣು
ಥಿಂಪು(ಭೂತಾನ್): ಹಾಲಿ ಹಾಗೂ 5 ಬಾರಿ ಚಾಂಪಿಯನ್ ಭಾರತ ತಂಡ ಈ ಬಾರಿ ಸ್ಯಾಫ್ ಅಂಡರ್-17 ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದೆ. ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ 1-0 ಗೆಲುವು ಲಭಿಸಿತು. ಪಂದ್ಯದುದ್ದಕ್ಕೂ ಇತ್ತಂಡಗಳಿಂದ ಭಾರಿ ಪೈಪೋಟಿ ಎದುರಾಯಿತು. ಹೀಗಾಗಿ ನಿಗದಿತ 90 ನಿಮಿಷಗಳಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ 91ನೇ ನಿಮಿಷದಲ್ಲಿ ಸುಮಿತ್ ಶರ್ಮಾ ಬಾರಿಸಿದ ಗೋಲು ಭಾರತಕ್ಕೆ ಗೆಲುವು ತಂದುಕೊಟ್ಟಿತು.
'ನಾಚಿಕೆಗೇಡು' ಕಳೆದ ಸಲ ಭಾರತ ಗೆದ್ದಿದ್ದ ಚೆಸ್ ಟ್ರೋಫಿ ನಾಪತ್ತೆ!
'ಎ' ಗುಂಪಿನ ತನ್ನ 2ನೇ ಹಾಗೂ ಕೊನೆ ಪಂದ್ಯದಲ್ಲಿ ಭಾರತ ಸೆ.24ರಂದು ಮಾಲೀಕ್ಸ್ ವಿರುದ್ಧ ಆಡಲಿದೆ. ಟೂರ್ನಿಯಲ್ಲಿ ಒಟ್ಟು 7 ತಂಡಗಳು ಪಾಲ್ಗೊಳ್ಳಲಿದ್ದು, ಎರಡೂ ಗುಂಪಿನ ಅಗ್ರ-2 ತಂಡಗಳು ಸೆಮಿಫೈನಲ್ ಪ್ರವೇ ಶಿಸಲಿವೆ. ಸೆ.28ಕ್ಕೆ ಸೆಮಿಫೈನಲ್, ಸೆ.30ರಂದು ಫೈನಲ್ ನಿಗದಿಯಾಗಿದೆ.
ಚೀನಾ ಓಪನ್ ಬ್ಯಾಡ್ಮಿಂಟನ್: ಸೋತು ಹೊರಬಿದ್ದ ಮಾಳವಿಕಾ
ಚೆಂಗ್ಡು: ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಶುಕ್ರವಾರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.43 ಮಾಳವಿಕಾ ಬನ್ಸೋಡ್ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 10-21, 16-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದರು.