ಆತ್ಮಹತ್ಯೆಗೆ ಯತ್ನಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ !
2011ರ ವಿಶ್ವಕಪ್ ತಂಡದ ಸದಸ್ಯ, ಅಗ್ರೆಸ್ಸೀವ್ ಕ್ರಿಕೆಟ್‌ನಿಂದಲೇ ಹೆಸರುವಾಸಿಯಾದ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಸ್ಫಾಟ್ ಫಿಕ್ಸಿಂಗ್ ಕುರಿತು ಸೀಕ್ರೆಟ್ ಬಯಲು ಮಾಡಿದ್ದಾರೆ. ಸ್ಫಾಟ್ ಫಿಕ್ಸಿಂಗ್ ಪ್ರಕರಣದ ಕುರಿತು ಶ್ರೀ ಹೇಳಿದ ಮಾತು ಇಲ್ಲಿದೆ.
ಮುಂಬೈ(ನ.27): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಬಿಗ್ ಬಾಸ್ ಮನೆ ಸೇರಿಕೊಂಡ ಬಳಿಕ ಹಲವು ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಆರಂಭದಲ್ಲಿ ಬಿಗ್‌ಬಾಸ್ ಮನೆಯಲ್ಲಿ ವಿವಾದದಿಂದಲೇ ಗುರುತಿಸಿಕೊಂಡ ಶ್ರೀಶಾಂತ್ ಇದೀಗ ಸ್ಫಾಟ್ ಫಿಕ್ಸಿಂಗ್ ಸೀಕ್ರೆಟ್ ಬಯಲು ಮಾಡುತ್ತಾ ಸುದ್ದಿಯಲ್ಲಿದ್ದಾರೆ.
ವಿಶ್ವಕಪ್ 2019: 30 ಸದಸ್ಯರ ಸಂಭವನೀಯ ಟೀಂ ಇಂಡಿಯಾ!
2013ರ ಐಪಿಎಲ್ ಟೂರ್ನಿಯಲ್ಲಿ ಸ್ಫಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು. ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಶ್ರೀಶಾಂತ್ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು. ಇಷ್ಟೇ ಅಲ್ಲ ಶ್ರೀಶಾಂತ್ ಬಂಧನಕ್ಕೆ ಒಳಗಾಗಿದ್ದರು. ಪ್ರಕರಣದಲ್ಲಿ ಶ್ರೀಶಾಂತ್ ಹೆಸರು ಕೇಳಿಬರುತ್ತಿದ್ದಂತೆ ಕೇರಳ ವೇಗಿ ಆತ್ಮಹತ್ಯೆಗೆ ಯತ್ನಿಸಿದ್ದರು.
ತನ್ನ ಮೇಲೆ 10 ಲಕ್ಷ ರೂಪಾಯಿ ಪಡೆದು ಫಿಕ್ಸಿಂಗ್ ಮಾಡಿದ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ ನನ್ನನ್ನ ಕ್ರಿಕೆಟ್ ಆಡೋದರಿಂದ ಮಾತ್ರವಲ್ಲ, ಮೈದಾನ ಪ್ರವೇಶಕ್ಕೂ ನಿರಾಕರಿಸಿದರು. ನನ್ನ ಮಕ್ಕಳು ಕ್ರಿಕೆಟ್ ಆಡುತ್ತಿದ್ದರೆ ಅದನ್ನ ನೋಡಲು ಕೂಡ ನನಗೆ ಅವಕಾಶವಿಲ್ಲ ಎಂದಿದ್ದರು ಎಂದು ಶ್ರೀಶಾಂತ್ ಬಿಕ್ಕಿ ಬಿಕ್ಕಿ ಅಳುತ್ತಾ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.