ಬೆಂಗಳೂರು(ನ.27): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈಗಾಗಲೇ ಟಿ20 ಸರಣಿ ಸಮಬಲಮಾಡಿರುವ ಭಾರತ ಇದೀಗ ಟೆಸ್ಟ್ ಗೆಲುವನ್ನ ಎದುರುನೋಡುತ್ತಿದೆ. ಆದರೆ ಇತ್ತ ಬಿಸಿಸಿಐ 2019ರ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿದೆ.

2019ರ ವಿಶ್ವಕಪ್ ಟೂರ್ನಿಗೆ ಯಾರು ಸ್ಥಾನ ಪಡೆಯುತ್ತಾರೆ ಅನ್ನೋ ಕುತೂಹಲ ಇದೀಗ ಎಲ್ಲರಲ್ಲಿ ಮನೆಮಾಡಿದೆ. ಇದೀಗ ಮುಂಬರುವ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಬಲ್ಲ 30 ಮಂದಿ ಸದಸ್ಯರ ಸಂಭವನೀಯ ತಂಡವನ್ನ ಇಲ್ಲಿ ನೀಡಲಾಗಿದೆ.

ಆರಂಭಿಕರು: ಶಿಖರ್ ಧವನ್,  ರೋಹಿತ್ ಶರ್ಮಾ, ಪೃಥ್ವಿ ಶಾ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್
ಮಧ್ಯಮ ಕ್ರಮಾಂಕ(1): ವಿರಾಟ್ ಕೊಹ್ಲಿ, ಅಂಬಾಟಿ ರಾಯುಡು, ಮನೀಶ್ ಪಾಂಡೆ, ಅಜಿಂಕ್ಯ ರಹಾನೆ, ಸುರೇಶ್ ರೈನಾ
ಮಧ್ಯಮ ಕ್ರಮಾಂಕ(2): ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಎಂ.ಎಸ್.ಧೋನಿ, ಕೇದಾರ್ ಜಾದವ್
ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಿಜಯ್ ಶಂಕರ್, ಕೆ ಗೌತಮ್, ಅಕ್ಸರ್ ಪಟೇಲ್
ಬೌಲರ್ಸ್(1): ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್
ಬೌಲರ್ಸ್(1): ಮೊಹಮ್ಮದ್ ಶಮಿ, ಆರ್ ಅಶ್ವಿನ್, ದೀಪಕ್ ಚಹಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹಮ್ಮದ್