1996ರ ಅಟ್ಲಾಂಟ್ ಓಲಿಂಪಿಕ್ಸ್'ನಲ್ಲಿ ಪುರುಷರ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಆದರೆ ಪೇಸ್ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ(ಸೆ.16): ಮುಂಬರುವ ಟೋಕಿಯೋ ಒಲಿಂಪಿಕ್ಸ್, ಏಷ್ಯಾ ಹಾಗೂ ಕಾಮನ್‌'ವೆಲ್ತ್ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತಿರುವ ದೇಶದ ಅಗ್ರ ಕ್ರೀಡಾಪಟುಗಳಿಗೆ ತಿಂಗಳಿಗೆ ₹50 ಸಾವಿರ ಭತ್ಯೆ ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ತಿಳಿಸಿದ್ದಾರೆ.

ಅಭಿನವ್ ಬಿಂದ್ರಾ ನೇತೃತ್ವದ ಒಲಿಂಪಿಕ್ ಕಾರ್ಯಪಡೆ ಮಾಡಿದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಟಾರ್ಗೆಟ್ ಒಲಿಂಪಿಕ್ ಪೋಡಿಯಂ(TOP) ಯೋಜನೆಯಡಿ 152 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿಯೊಬ್ಬರಿಗೂ ವೈಯಕ್ತಿಕ ಖರ್ಚಿಗೆಂದು ಪ್ರತಿ ತಿಂಗಳು ₹50 ಸಾವಿರ ನೀಡಲಾಗುವುದು ಎಂದು ರಾಜ್ಯವರ್ಧನ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಈ ಪಟ್ಟಿಯಿಂದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೆಸರನ್ನು ಕೈಬಿಡಲಾಗಿದೆ. 1996ರ ಅಟ್ಲಾಂಟ್ ಓಲಿಂಪಿಕ್ಸ್'ನಲ್ಲಿ ಪುರುಷರ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಆದರೆ ಪೇಸ್ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.