ಐಪಿಎಲ್ ಟೂರ್ನಿ ನಡುವೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆಯಾಗಿದೆ. ಇನ್ನುಳಿದ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರ ಅಲಭ್ಯರಾಗಿದ್ದಾರೆ. ಮುಂಬೈ ತಂಡದಿಂದ ತವರಿಗೆ ವಾಪಾಸ್ಸಾದ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ.

ಮುಂಬೈ(ಏ.17): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ಸಜ್ಜಾಗಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಆದರೆ ಐಪಿಎಲ್ ಟೂರ್ನಿ ನಡುವೆ ಮುಂಬೈ ತಂಡಕ್ಕೆ ನಡುಕ ಶುರುವಾಗಿದೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಹರ್ಷಲ್ ಪಟೇಲ್ ಔಟ್, ಕನ್ನಡಿಗನಿಗೆ ಹೊಡೆಯಿತು ಜಾಕ್’ಪಾಟ್..!

ಭುಜದ ಗಾಯದ ಸಮಸ್ಯೆಯಿಂದಾಗಿ ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಅಲ್ಜಾರಿ ಜೋಸೆಫ್‌ 12ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಏ.13 ರಂದು ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವೇಳೆ ಜೋಸೆಫ್‌ ಗಾಯಗೊಂಡಿದ್ದರು. ನ್ಯೂಜಿಲೆಂಡ್‌ ವೇಗಿ ಆ್ಯಡಮ್‌ ಮಿಲ್ನೆ ಗಾಯಗೊಂಡಿದ್ದ ಕಾರಣ ಅವರ ಬದಲಿಗೆ ಜೋಸೆಫ್‌ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದರು. 

ಇದನ್ನೂ ಓದಿ: ನನ್ನ ಬೆಂಬಲ ನರೇಂದ್ರ ಮೋದಿಗೆ-ಜಡೇಜಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ!

ಏ.6 ರಂದು ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ವಿಂಡೀಸ್‌ ವೇಗಿ 12 ರನ್‌ಗೆ 6 ವಿಕೆಟ್‌ ಪಡೆದು ದಾಖಲೆ ಬರೆದಿದ್ದರು. ಇಷ್ಟೇ ಅಲ್ಲ ಮುಂಬೈಗೆ ಭರ್ಜರಿ ಗೆಲುವಿನ ರೂವಾರಿಯಾಗಿದ್ದರು. ಇದೀಗ ಜೊಸೆಫ್ ಅಲಭ್ಯತೆ ಮುಂಬೈ ತಂಡಕ್ಕೆ ತೀವ್ರ ಹೊಡೆತ ಬೀಳಲಿದೆ.