ಟಿ20 ಐಸಿಸಿ ರ‌್ಯಾಂಕ್'ನಲ್ಲಿ ಬಡ್ತಿ ಪಡೆದ ಭುವಿ ಹಾಗೂ ಧವನ್

Bhuvneshwar Kumar Shikhar Dhawan make significant movement in ICC T20I Player Rankings
Highlights

ಧವನ್ ಸರಣಿಯಲ್ಲಿ 143 ರನ್ ಬಾರಿಸಿದ್ದರೆ, ಭುವನೇಶ್ವರ್ ಕುಮಾರ್ ಒಟ್ಟು 7 ವಿಕೇಟ್ ಪಡೆದಿದ್ದರು.

ಮುಂಬೈ(ಫೆ.25): ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಆರಂಭಿಕ ಆಟಗಾರ ಶಿಖರ್ ಧವನ್ ಐಸಿಸಿ ರ‌್ಯಾಂಕ್''ನಲ್ಲಿ ಹೆಚ್ಚು ಅಂಕಗಳೊಂದಿಗೆ ಮೇಲಕ್ಕೇರಿದ್ದಾರೆ.

ಧವನ್ 28ನೇ ಸ್ಥಾನದಿಂದ 14ನೇ ಸ್ಥಾನಕ್ಕೆ, ಭುವಿ 20ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಧವನ್ ಸರಣಿಯಲ್ಲಿ 143 ರನ್ ಬಾರಿಸಿದ್ದರೆ, ಭುವನೇಶ್ವರ್ ಕುಮಾರ್ ಒಟ್ಟು 7 ವಿಕೇಟ್ ಪಡೆದಿದ್ದರು. ಟಿ20 ಬ್ಯಾಟ್ಸ್'ಮೆನ್'ಗಳಲ್ಲಿ ಕೊಹ್ಲಿ 3ನೇ ಹಾಗೂ ಕೆ.ಎಲ್. ರಾಹುಲ್ 6ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಪಾಕ್'ನ ಬಾಬರ್ ಅಜಾಂ ಇದ್ದಾರೆ. ಬೌಲರ್'ಗಳಲ್ಲಿ ಜಸ್ಪ್ರೀತ್ ಬುಮ್ರಾ 4ನೇ ಸ್ಥಾನದಲ್ಲಿದ್ದಾರೆ.

loader