ಟೀಂ ಇಂಡಿಯಾ ಕ್ರಿಕೆಟಿಗರೂ ಕೂಡಾ ಟ್ವೀಟ್ ಮಾಡುವ ಮೂಲಕ ಅಸಂಖ್ಯಾತ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. 2017ರಲ್ಲಿ ಕೆಲವು ಅಪರೂಪದ ಕ್ರಿಕೆಟ್ ಸಂಬಂದಿತ ಟ್ವೀಟ್'ಗಳು ನಿಮ್ಮ ಮುಂದೆ...

ಸೆಲಿಬ್ರಿಟಿಗಳು ಮನರಂಜನೆಗಾಗಿ ಹಾಗೂ ಜಗತ್ತಿನ ನಾನಾ ಮೂಲೆಗಳಲ್ಲಿರುವ ಜನರೊಂದಿಗೆ ಸಂವಹನ ಸಾಧಿಸಲು ಹಾಗೂ ಅಭಿಪ್ರಾಯ ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಟ್ವಿಟ್ಟರ್'ನಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಟೀಂ ಇಂಡಿಯಾ ಕ್ರಿಕೆಟಿಗರೂ ಕೂಡಾ ಟ್ವೀಟ್ ಮಾಡುವ ಮೂಲಕ ಅಸಂಖ್ಯಾತ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. 2017ರಲ್ಲಿ ಕೆಲವು ಅಪರೂಪದ ಕ್ರಿಕೆಟ್ ಸಂಬಂದಿತ ಟ್ವೀಟ್'ಗಳು ನಿಮ್ಮ ಮುಂದೆ...

ಎಂ.ಎಸ್. ಧೋನಿ ನಾಯಕತ್ವ ತೊರೆದಾಗ ವಿರಾಟ್ ಕೊಹ್ಲಿ ಮಾಡಿದ ಟ್ವೀಟ್:

Scroll to load tweet…

ಕ್ರೀಡೆಗೆ ಗಡಿಯಿಲ್ಲ ಎನ್ನುವುದಕ್ಕೆ ಪಾಕಿಸ್ತಾನದ ಕ್ರಿಕೆಟಿಗ ಸರ್ಫಾಜ್ ಅಹಮ್ಮದ್ ಮಗುವನ್ನು ಧೋನಿ ಎತ್ತಿಕೊಂಡಿರುವ ಚಿತ್ರವನ್ನು ಹಿರಿಯ ಪತ್ರಕರ್ತ ರಾಜ್'ದೀಪ್ ಸರ್'ದೇಸಾಯಿ ಮಾಡಿದ ಟ್ವೀಟ್

Scroll to load tweet…

ಕ್ರಿಕೆಟ್ ಸ್ಪಿರಿಟ್: ಪಾಕಿಸ್ತಾನ ಮಹಿಳಾ ತಂಡದ ಆಟಗಾರ್ತಿ ಕೈನಾಟ್ ಇಮ್ತಿಯಾಜ್ ತನ್ನ ರೋಲ್ ಮಾಡೆಲ್ ಟೀಂ ಇಂಡಿಯಾ ಮಹಿಳಾ ತಂಡದ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿಯನ್ನು ಭೇಟಿ ಮಾಡಿದ ಕ್ಷಣ. ಕೈನಾಟ್ ಇಮ್ತಿಯಾಜ್ ಕ್ರಿಕೆಟ್ ಬದುಕಿನ ಹೋರಾಟದ ಕಥೆಯನ್ನು ಐಸಿಸಿ ಜಗತ್ತಿಗೆ ಪರಿಚಯಿಸಿತ್ತು.

Scroll to load tweet…

ಅದ್ಭುತ ಪ್ರತಿಕ್ರಿಯೆ:

Scroll to load tweet…

ಆಸೀಸ್ ಆಟಗಾರರ ಬಸ್ ಮೇಲೆ ಗುವಾಹಟಿಯಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಿದಾಗ, ಇಡೀ ದೇಶವೇ ಆಸೀಸ್ ಕ್ರಿಕೆಟಿಗರ ಕ್ಷಮೆ ಕೋರಿತ್ತು. ಈ ವೇಳೆ ಆಸೀಸ್ ಆಲ್ರೌಂಡರ್ ಮೋಯಿಸ್ ಹೆನ್ರಿಕೇಸ್ ಹೀಗಾಗಬಾರದಿತ್ತು. ಆದರೆ ಅಸ್ಸಾಂ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಕ್ಕಳ ಬೆಂಬಲ ನಿಜಕ್ಕೂ ಅದ್ಭುತವಾಗಿತ್ತು ಎಂದು ಹೇಳುವ ಮೂಲಕ ಭಾರತೀಯ ಹೃದಯ ಗೆದ್ದಿದ್ದರು.

ಟೇಲರ್'ಗೆ ವೀರೂ ಟಾಂಗ್ ಕೊಟ್ಟಿದ್ದು:

Scroll to load tweet…

ಟ್ವಿಟ್ಟರ್ ಕಿಂಗ್ ವಿರೇಂದ್ರ ಸೆಹ್ವಾಗ್ ಭಾರತ-ನ್ಯೂಜಿಲೆಂಡ್ ಸರಣಿಯಲ್ಲಿ ರಾಸ್ ಟೇಲರ್ ಅವರನ್ನು ದರ್ಜಿ ಎಂದು ಕರೆಯುವ ಮೂಲಕ ಟ್ವೀಟ್ ವಾರ್ ನಡೆಸಿದ್ದು ಸಾಕಷ್ಟು ವೈರಲ್ ಆಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷ ಐಪಿಎಲ್ ನಿಷೇಧ ಪೂರೈಸಿದ ಬಳಿಕ ಸಿಎಸ್'ಕೆ ಟ್ವಿಟ್ಟರ್ ಖಾತೆಯಲ್ಲಿ ಕಾಣಿಸಿಕೊಂಡಿದ್ದು.

Scroll to load tweet…

ವರ್ಷದ ಗೋಲ್ಡನ್ ಟ್ವೀಟ್:

Scroll to load tweet…

ವಿರಾಟ್ ಕೊಹ್ಲಿ ತಾವು ಅನುಷ್ಕಾ ಶರ್ಮಾ ಅವರನ್ನು ವಿವಾಹ ಬಂಧನಕ್ಕೆ ಒಳಗಾಗುವ ಕ್ಷಣವನ್ನು ಜಗತ್ತಿಗೆ ಟ್ವೀಟ್ ಮೂಲಕ ಹೇಳಿದ್ದು, ಗೋಲ್ಡನ್ ಟ್ವೀಟ್ ಆಫ್ ದಿ ಇಯರ್ ಎಂಬ ಗೌರವಕ್ಕೆ ಪಾತ್ರವಾಯಿತು...

ವಿರುಷ್ಕಾ ಜೋಡಿ ಸೌತ್ ಆಫ್ರಿಕಾದಲ್ಲಿ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಿದ್ದು, ಅಭಿಮಾನಿಗಳಿಗೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

Scroll to load tweet…