Asianet Suvarna News Asianet Suvarna News

Bengaluru Open 2023: ಭಾರ​ತದ ಚಂದ್ರಶೇಖರ್, ಪ್ರಶಾಂತ್ ರನ್ನರ್ ಅಪ್‌..!

ಬೆಂಗಳೂರು ಓಪನ್‌ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಭಾರತದ ಜೋಡಿ ರನ್ನರ್ ಅಪ್‌
ಡಬಲ್ಸ್‌ನಲ್ಲಿ ಕೊರಿಯಾದ ಚುಂಗ್-ಚೈನೀಸ್ ತೈಪೆಯ ಯು ಚಾಂಪಿಯನ್
ಕಳೆದೆರಡು ಆವೃತ್ತಿಯ ಡಬಲ್ಸ್‌ನಲ್ಲಿ ಭಾರತೀಯರು ಚಾಂಪಿಯನ್ ಆಗಿದ್ದರು

Bengaluru Open 2023 India Anirudh Prashanth finish runners up kvn
Author
First Published Feb 26, 2023, 8:42 AM IST

ಬೆಂಗ​ಳೂ​ರು(ಫೆ.26): 5ನೇ ಆವೃತ್ತಿಯ ಬೆಂಗಳೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಭಾರ​ತದ ಡಬಲ್ಸ್‌ ಜೋಡಿ ಅನಿರುದ್ಧ್ ಚಂದ್ರಶೇಖರ್‌ ಹಾಗೂ ವಿಜಯ್‌ ಸುಂದರ್‌ ಪ್ರಶಾಂತ್‌ ರನ್ನ​ರ್‌-ಅಪ್‌ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊಂಡಿ​ದ್ದಾ​ರೆ. ಕಳೆ​ದೆ​ರಡು ಆವೃ​ತ್ತಿ​ಗ​ಳಲ್ಲಿ ಡಬ​ಲ್ಸ್‌​ನಲ್ಲಿ ಭಾರ​ತದ ಜೋಡಿ ಚಾಂಪಿ​ಯನ್‌ ಆಗಿ​ದ್ದರೂ ಈ ಬಾರಿ ಪ್ರಶಸ್ತಿ ಗೆಲ್ಲಲು ಭಾರ​ತೀ​ಯರು ವಿಫ​ಲ​ರಾ​ದ​ರು.

ಶನಿ​ವಾರ ನಡೆದ ಪುರು​ಷರ ಡಬಲ್ಸ್‌ ಫೈನ​ಲ್‌​ನಲ್ಲಿ ಭಾರತ ಜೀಡು ದಕ್ಷಿಣ ಕೊ​ರಿ​ಯಾದ ಚುಂಗ್‌ ಯನ್‌​ ಸಿಯಾಂಗ್‌-ಚೈನೀಸ್‌ ತೈಪೆಯ ಯು ಸು ವಿರುದ್ಧ 6-3, 6-7, 9-11ರಿಂದ ವೀರೋ​ಚಿತ ಸೋಲು ಕಂಡಿತು. ಆರಂಭ​ದಲ್ಲೇ ಪ್ರಾಬಲ್ಯ ಸಾಧಿ​ಸಿ ಮೊದಲ ಸೆಟ್‌ ಗೆದ್ದ ಭಾರ​ತೀಯ ಜೋಡಿ 2ನೇ ಸೆಟ್‌​ನಲ್ಲೂ ಉತ್ತಮ ಆರಂಭ ಪಡೆ​ಯಿತು. ಆದರೆ ಬಳಿಕ ತಿರು​ಗೇಟು ನೀಡಿದ ಕೊರಿ​ಯಾ-ತೈಪೆ ಜೋಡಿ 2ನೇ ಸೆಟ್‌​ನಲ್ಲಿ ತೀವ್ರ ಹೋರಾಟ ಪ್ರದ​ರ್ಶಿಸಿ ಪಂದ್ಯ ಸಮ​ಬ​ಲ​ಗೊ​ಳಿ​ಸಲು ಯಶ​ಸ್ವಿ​ಯಾ​ಯಿತು. ಕೊನೆ ಸೆಟ್‌​ನಲ್ಲಿ ಉಭಯ ಜೋಡಿ​ಗ​ಳಿಂದ ತೀವ್ರ ಪೈಪೋಟಿ ಕಂಡು​ಬಂದರೂ ಭಾರ​ತದ ಜೋಡಿಗೆ ಪಂದ್ಯ ಗೆಲ್ಲಲು ಸಾಧ್ಯ​ವಾ​ಗ​ಲಿ​ಲ್ಲ.

2017ರ ಚೊಚ್ಚಲ ಅವೃ​ತ್ತಿ​ಯ ಡಬ​ಲ್ಸ್‌​ನಲ್ಲಿ ಭಾರ​ತದ ದಿವಿಜ್‌ ಶರ​ಣ್‌-ರಷ್ಯಾದ ಎಲ್ಗಿನ್‌ ಪ್ರಶಸ್ತಿ ಗೆದ್ದಿ​ದ್ದರು. 2018ರಲ್ಲಿ ಟ್ರೋಫಿ ಆಸ್ಪ್ರೇ​ಲಿ​ಯಾದ ಮ್ಯಾಕ್ಸ್‌ ಪುರ್ಸೆ​ಲ್‌-ಲ್ಯುಕ್‌ ಸ್ಯಾವಿಲ್ಲೆ ಜೋಡಿಯ ಪಾಲಾ​ಗಿತ್ತು. 2020ರಲ್ಲಿ ಪೂರವ್‌ ರಾಜ್‌ ಜೊತೆ​ಗೂಡಿ ಡಬಲ್ಸ್‌ ಚಾಂಪಿ​ಯನ್‌ ಆಗಿದ್ದ ರಾಮ್‌​ಕು​ಮಾರ್‌ ರಾಮ​ನಾ​ಥನ್‌, ಕಳೆದ ಆವೃ​ತ್ತಿ​ಯಲ್ಲಿ ಸಾಕೇತ್‌ ಮೈನೇನಿ ಜೊತೆ 2ನೇ ಬಾರಿ ಡಬಲ್ಸ್‌ ಪ್ರಶ​ಸ್ತಿಗೆ ಮುತ್ತಿ​ಕ್ಕಿ​ದ್ದರು.

ಅಲಿಬಾಗ್‌ನಲ್ಲಿ ಕೋಟ್ಯಾಂತರ ರುಪಾಯಿ ಮೌಲ್ಯದ ಐಶಾರಾಮಿ ವಿಲ್ಲಾ ಖರೀದಿಸಿದ ವಿರಾಟ್ ಕೊಹ್ಲಿ..! ಏನಿದರ ವಿಶೇಷತೆ?

ಸಿಂಗ​ಲ್ಸ್‌ ಫೈನ​ಲ್‌​ನಲ್ಲಿ ಪುರ್ಸೆ​ಲ್‌-ಡಕ್ವರ್ತ್‌

ಇದೇ ವೇಳೆ ಪುರು​ಷರ ಸಿಂಗ​ಲ್ಸ್‌​ನಲ್ಲಿ ಹಾಲಿ ವಿಂಬ​ಲ್ಡನ್‌ ಡಬಲ್ಸ್‌ ಚಾಂಪಿ​ಯನ್‌ ಆಸ್ಪ್ರೇ​ಲಿ​ಯಾದ ಮ್ಯಾಕ್ಸ್‌ ಪುರ್ಸೆಲ್‌ ಹಾಗೂ ಜೇಮ್ಸ್‌ ಡಕ್ವತ್‌ರ್‍ ಫೈನ​ಲ್‌ಗೆ ಲಗ್ಗೆ ಇಟ್ಟರು. ಕಳೆದ ವಾರ ಚೆನ್ನೈ ಓಪನ್‌ ಪ್ರಶಸ್ತಿ ಗೆದ್ದಿದ್ದ ಪುರ್ಸೆಲ್‌ ಸೆಮಿ​ಫೈ​ನ​ಲ್‌​ನಲ್ಲಿ ಕ್ರೊವೇ​ಷಿ​ಯಾದ ಹಮದ್‌ ಮೆಡ್‌​ಜೆ​ಡೋ​ವಿಚ್‌ರನ್ನು 6-2, 5-7, 7-6 ಸೆಟ್‌​ಗ​ಳಲ್ಲಿ ಮಣಿ​ಸಿ​ದರು. ಅವರ ಒಂದು ವಾರ​ದೊ​ಳಗೆ 2ನೇ ಪ್ರಶಸ್ತಿ ಗೆಲ್ಲಲು ಕಾತ​ರಿ​ಸು​ತ್ತಿ​ದ್ದಾರೆ. ಇನ್ನು, ಡಕ್ವತ್‌ರ್‍ ತಮ್ಮದೇ ದೇಶದ ಜೇಮ್ಸ್‌ ಮೆಕ್ಕಾಬೆ ವಿರುದ್ಧ 6-3, 6-3 ಸೆಟ್‌​ಗ​ಳಲ್ಲಿ ಜಯ​ಗ​ಳಿ​ಸಿ​ದರು. ಭಾನು​ವಾರ ಫೈನಲ್‌ ನಡೆ​ಯ​ಲಿದೆ.

ಇಂದು ಡೆಲ್ಲಿ ಮ್ಯಾರ​ಥಾ​ನ್‌: ಏಷ್ಯಾಡ್‌ ಅರ್ಹತೆ ಮೇಲೆ ರಾಜ್ಯದ ಬೆಳ್ಳಿಯಪ್ಪ ಕಣ್ಣು

ನವದೆಹಲಿ: ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ), ಫಿಟ್‌ ಇಂಡಿಯಾ ಮಾನ್ಯತೆಯೊಂದಿಗೆ ಭಾನು​ವಾರ ಡೆಲ್ಲಿ ಮ್ಯಾರಥಾನ್‌ ನಡೆ​ಯ​ಲಿದ್ದು, ಮುಂಬರುವ ಹ್ಯಾಂಗ್ಝೂ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಕನ್ನಡಿಗ ಎ.ಬೆಳ್ಳಿಯಪ್ಪ, ದೇಶದ ಅಗ್ರ ಓಟಗಾರರಾದ ಶ್ರೀನು ಬುಗತ, ಜ್ಯೋತಿ ಸಿಂಗ್‌ ಗಾವಟೆ, 2022ರ ಆವೃ​ತ್ತಿಯ ಬೆಳ್ಳಿ ವಿಜೇ​ತ ಅನೀಶ್‌ ಥಾಪ ಸೇರಿದಂತೆ ಪ್ರಮುಖ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ರೇಸ್‌ನಲ್ಲಿ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯಲು ಪುರುಷರಿಗೆ 2 ಗಂಟೆ 15 ನಿಮಿಷ, ಮಹಿಳೆಯರಿಗೆ 2 ಗಂಟೆ 37 ನಿಮಿಷದ ಅರ್ಹತಾ ಸಮಯ ನಿಗದಿಪಡಿಸಲಾಗಿದೆ. ಏಷ್ಯನ್‌ ಗೇಮ್ಸ್‌ ಸೆ.23ರಿಂದ ಅ.8ರ ವರೆಗೆ ಚೀನಾದಲ್ಲಿ ನಡೆಯಲಿದೆ.
 

Follow Us:
Download App:
  • android
  • ios